ಮಹಿಳಾ ಶಿಷ್ಯೆ ಮೇಲೆ ಅತ್ಯಾಚಾರ ಎಸಗಿದ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ: ಮಹತ್ವದ ತೀರ್ಪು ನೀಡಿದ ಗುಜರಾತ್ ಕೋರ್ಟ್

ನವದೆಹಲಿ: ಶಿಷ್ಯೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಅಸುಮಲ್ ಸಿರುಮಲಾನಿ ಹರ್ಪಲಾನಿ(ಅಸಾರಾಂ ಬಾಪು) ತಪ್ಪಿತಸ್ಥನೆಂದು ಗುಜರಾತ್‌ನ ಗಾಂಧಿನಗರದ ನ್ಯಾಯಾಲಯ ತೀರ್ಪು ನೀಡಿದೆ.

ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಕೆ. ಸೋನಿ ಅವರು ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ಮಂಗಳವಾರ (ಜನವರಿ 31) ಆದೇಶವನ್ನು ಕಾಯ್ದಿರಿಸಿದ್ದಾರೆ.

2001 ಮತ್ತು 2006ರ ನಡುವೆ ಅಹಮದಾಬಾದ್‌ನ ಹೊರವಲಯದಲ್ಲಿರುವ ಅಸಾರಾಂ ಬಾಪು ಅವರ ಆಶ್ರಮದಲ್ಲಿ ವಾಸವಿದ್ದ ಮಹಿಳೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಲಾಗಿದೆ ಎಂದು ಚಂದ್‌ಖೇಡಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಸೋಮವಾರ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್‌ಸಿ ಕೊಡೆಕರ್ ಅವರು, ನ್ಯಾಯಾಲಯವು ಪ್ರಾಸಿಕ್ಯೂಷನ್ ಅತ್ಯಾಚಾರ, ಅಸ್ವಾಭಾವಿಕ ಅಪರಾಧಗಳು ಮತ್ತು ಅಕ್ರಮ ಬಂಧನಕ್ಕಾಗಿ ಭಾರತೀಯ ದಂಡ ಸಂಹಿತೆಯ ಇತರ ನಿಬಂಧನೆಗಳ ಅಡಿಯಲ್ಲಿ ಅಸಾರಾಂನನ್ನು ದೋಷಿ ಎಂದು ತೀರ್ಪು ನೀಡಿದೆ ಎಂದು ಹೇಳಿದ್ದಾರೆ.

ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ವಿವಾದಿತ ದೇವಮಾನವ ಸದ್ಯ ಜೋಧಪುರದ ಜೈಲಿನಲ್ಲಿದ್ದಾನೆ.

2013ರ ಅಕ್ಟೋಬರ್‌ನಲ್ಲಿ ಸೂರತ್ ಮೂಲದ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಅಕ್ರಮ ಬಂಧನದ ಆರೋಪವನ್ನು ಅಸಾರಾಂ ಬಾಪು ಮತ್ತು ಇತರ 7 ಮಂದಿ ಹೊತ್ತಿದ್ದರು. ವಿಚಾರಣೆಯ ವೇಳೆ ಓರ್ವ ಸಂತ್ರಸ್ತೆ ಸಾವನ್ನಪ್ಪಿದ್ದರು. 2014ರ ಜುಲೈನಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read