ದೇಶದ ಜನತೆಗೆ ಗುಡ್ ನ್ಯೂಸ್: ಶೀಘ್ರದಲ್ಲೇ GST ದರ ಮತ್ತಷ್ಟು ಕಡಿತ

ಮುಂಬೈ: ಜಿಎಸ್‌ಟಿ ದರಗಳನ್ನು ಮತ್ತಷ್ಟು ಕಡಿಮೆ ಮಾಡಲಾಗುವುದು. ತೆರಿಗೆ ದರಗಳು ಮತ್ತು ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸುವ ಪ್ರಕ್ರಿಯೆಯು ಬಹುತೇಕ ಅಂತಿಮ ಹಂತವನ್ನು ತಲುಪಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಜುಲೈ 1, 2017 ರಂದು ಜಿಎಸ್‌ಟಿ ಪ್ರಾರಂಭವಾದ ಸಮಯದಲ್ಲಿ ಶೇ. 15.8 ರಷ್ಟಿದ್ದ ಆದಾಯ ತಟಸ್ಥ ದರ(ಆರ್‌ಎನ್‌ಆರ್) 2023 ರಲ್ಲಿ ಶೇ. 11.4 ಕ್ಕೆ ಇಳಿದಿದೆ. ಇದು ಇನ್ನೂ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

ವಿತ್ತ ಸಚಿವೆ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಹಣಕಾಸು ಮಂತ್ರಿಗಳನ್ನು ಒಳಗೊಂಡ ಜಿಎಸ್‌ಟಿ ಕೌನ್ಸಿಲ್ ಸೆಪ್ಟೆಂಬರ್ 2021 ರಲ್ಲಿ ಜಿಎಸ್‌ಟಿ ದರಗಳನ್ನು ತರ್ಕಬದ್ಧಗೊಳಿಸಲು ಮತ್ತು ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸಲು ಸಚಿವರ ಗುಂಪನ್ನು(ಜಿಒಎಂ) ಸ್ಥಾಪಿಸಿತ್ತು. ಜಿಒಎಂ ಆರು ರಾಜ್ಯಗಳ ಹಣಕಾಸು ಮಂತ್ರಿಗಳನ್ನು ಒಳಗೊಂಡಿದೆ. ಜಿಎಸ್‌ಟಿ ರಚನೆಯನ್ನು ಸರಳೀಕರಿಸಲು ಸುಧಾರಣೆಗಳನ್ನು ಪರಿಶೀಲಿಸುವ ಮತ್ತು ಶಿಫಾರಸು ಮಾಡುವ ಜವಾಬ್ದಾರಿಯನ್ನು ಹೊಂದಿದೆ.

‘ದಿ ಎಕನಾಮಿಕ್ ಟೈಮ್ಸ್ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಜಿಎಸ್‌ಟಿ ದರಗಳು ಮತ್ತು ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸುವ ಸಮಯ ಬಂದಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೀತಾರಾಮನ್, ಆ ಕೆಲಸವು ಬಹುತೇಕ ಅಂತಿಮ ಹಂತವನ್ನು ತಲುಪಿದೆ. ಈಗ, ಈ ಹಂತದಲ್ಲಿ, ಗುಂಪುಗಳು(ಜಿಒಎಂ) ಅತ್ಯುತ್ತಮ ಕೆಲಸ ಮಾಡಿದೆ. ಮತ್ತೊಮ್ಮೆ, ಪ್ರತಿಯೊಂದು ಗುಂಪಿನ ಕಾರ್ಯಗಳನ್ನು ಸಂಪೂರ್ಣವಾಗಿ ಪರಿಶೀಲಿಸುವ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ. ನಂತರ ನಾವು ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಬಹುದು ಎಂದು ಅವರು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read