HomeKarnatakaಪಿಗ್ಮಿ ಏಜೆಂಟರ ವೇತನಕ್ಕೆ ಜಿಎಸ್‌ಟಿ ಅನ್ವಯವಾಗಲ್ಲ: ಹೈಕೋರ್ಟ್ ಆದೇಶ

ಪಿಗ್ಮಿ ಏಜೆಂಟರ ವೇತನಕ್ಕೆ ಜಿಎಸ್‌ಟಿ ಅನ್ವಯವಾಗಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಪಿಗ್ಮಿ ಏಜೆಂಟರು ಬ್ಯಾಂಕ್ ನೌಕರರಾಗಿದ್ದು, ಅವರು ಸಂಗ್ರಹಿಸುವ ಠೇವಣಿಗೆ ಪ್ರತಿಯಾಗಿ ನೀಡುವ ವೇತನಕ್ಕೆ ಜಿಎಸ್‌ಟಿ ವಿಧಿಸಲು ಬರುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಹುಬ್ಬಳ್ಳಿ ವಿಭಾಗದ ಉಪ ಆಯುಕ್ತರು ಬೆಳಗಾವಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿಗೆ ನೀಡಿದ್ದ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.

ಪಿಗ್ಮಿ ಏಜೆಂಟರು ಬ್ಯಾಂಕುಗಳ ಅಧೀನದಲ್ಲಿ ಕೆಲಸ ಮಾಡುತ್ತಾರೆ. ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಿಲ್ಲ. ಅವರ ಅವರು ಸಂಗ್ರಹಿಸುವ ಠೇವಣಿ ಮೇಲೆ ಬ್ಯಾಂಕ್ ನಿಯಂತ್ರಣವಿರುತ್ತದೆ. ಅವರಿಗೆ ಕಮಿಷನ್ ರೂಪದಲ್ಲಿ ನೀಡುವ ವೇತನವನ್ನು ಬ್ಯಾಂಕ್ ನಿಯಂತ್ರಿಸುತ್ತದೆ. ಸಂಗ್ರಹಿಸುವ ಹಣವು ಬ್ಯಾಂಕ್ ನಲ್ಲಿ ಇಡಲಾಗುತ್ತದೆ. ಬ್ಯಾಂಕ್ ನೌಕರರಂತೆ ಸೌಲಭ್ಯಗಳನ್ನು ನೀಡಲಾಗುತ್ತದೆ. ನೌಕರ, ಉದ್ಯೋಗದಾತರೊಂದಿಗೆ ಏಜೆಂಟ್ ಮತ್ತು ಬ್ಯಾಂಕು ನಡುವೆ ಸಂಬಂಧವಿರುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ..

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿಗ್ಮಿ ಏಜೆಂಟರಿಗೆ ನೀಡುವ ಕಮಿಷನ್ ಮೇಲೆ ರಿವರ್ಸ್ ಚಾರ್ಜ್ ವ್ಯವಸ್ಥೆಯಡಿ ಜಿಎಸ್‌ಟಿ ಪಾವತಿಸುವ ಸಂಬಂಧ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಬ್ಯಾಂಕ್ ಹೈಕೋರ್ಟ್ ಮೆಟ್ಟಿಲೇರಿತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular