ಬೆಲ್ಲ, ಪೆನ್ಸಿಲ್ ಶಾರ್ಪನರ್, ಟ್ರ್ಯಾಕಿಂಗ್ ಸಾಧನ ಮೇಲಿನ GST ಇಳಿಕೆ

ನವದೆಹಲಿ: ಜಿಎಸ್‌ಟಿ ಕೌನ್ಸಿಲ್ ಪೆನ್ಸಿಲ್ ಶಾರ್ಪನರ್‌ ಗಳ ಮೇಲಿನ ಜಿಎಸ್‌ಟಿ ದರವನ್ನು ಶೇಕಡ 18 ರಿಂದ ಶೇಕಡಾ 12 ಕ್ಕೆ ಇಳಿಸಲು ತೀರ್ಮಾನಿಸಿದೆ. ದ್ರವ ರೂಪದ ಬೆಲ್ಲದ ಮೇಲಿನ ಜಿಎಸ್‌ಟಿ ದರವನ್ನು ಶೇಕಡ 18 ರಿಂದ ಶೂನ್ಯ ಅಥವಾ ಶೇಕಡಾ 5 ಕ್ಕೆ ಇಳಿಸಲು ನಿರ್ಧರಿಸಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಶನಿವಾರ 49 ನೇ ಸಭೆಯಲ್ಲಿ ಹಲವಾರು ನಿರ್ಧಾರ ತೆಗೆದುಕೊಂಡಿದೆ.

ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, ಹಣಕಾಸು ಸಚಿವರು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸುವ ಬಗ್ಗೆ ಮತ್ತು ಪಾನ್ ಮಸಾಲಾ ಮತ್ತು ಗುಟ್ಖಾ ವ್ಯವಹಾರಗಳಲ್ಲಿ ತೆರಿಗೆ ವಂಚನೆಯನ್ನು ತಡೆಯುವ ಬಗ್ಗೆ ಮಾತನಾಡಿದರು.

ಪೆನ್ಸಿಲ್ ಶಾರ್ಪನರ್‌ಗಳ ಮೇಲಿನ ಜಿಎಸ್‌ಟಿ 18% ರಿಂದ 12% ಕ್ಕೆ ಇಳಿದಿದೆ. ಅಲ್ಲದೆ, ಕೆಲವು ಷರತ್ತುಗಳಿಗೆ ಒಳಪಟ್ಟು ಬಾಳಿಕೆ ಬರುವ ಕಂಟೈನರ್‌ಗಳಲ್ಲಿ ಅಂಟಿಕೊಂಡಿರುವ ಟ್ಯಾಗ್‌ಗಳ ಟ್ರ್ಯಾಕಿಂಗ್ ಸಾಧನಗಳು ಅಥವಾ ಡೇಟಾ ಲಾಗರ್‌ಗಳ ಮೇಲಿನ ಜಿಎಸ್‌ಟಿಯಲ್ಲಿ 18% ರಿಂದ ಶೂನ್ಯಕ್ಕೆ ಕಡಿತಗೊಳಿಸುವ ಚಿಂತನೆ ಇದೆ ಎಂದು ಹೇಳಲಾಗಿದೆ.

ರಾಬ್ ಒಂದು ರೀತಿಯ ದ್ರವ ಬೆಲ್ಲವಾಗಿದ್ದು ಅದು ಉತ್ತರ ಪ್ರದೇಶ ಮತ್ತು ಇತರ ಬೆಲ್ಲ ಉತ್ಪಾದಿಸುವ ರಾಜ್ಯಗಳಿಗೆ ವಿಶಿಷ್ಟವಾಗಿದೆ. ರಾಬ್ ಮೇಲಿನ ಜಿಎಸ್‌ಟಿ ದರವನ್ನು 18% ರಿಂದ ಶೂನ್ಯ ಅಥವಾ 5% ಕ್ಕೆ ಇಳಿಸುವ ಚಿಂತನೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read