HomeKarnatakaBIG NEWS: ಗೃಹಲಕ್ಷ್ಮೀ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ

BIG NEWS: ಗೃಹಲಕ್ಷ್ಮೀ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ

ಬೆಳಗಾವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಹಲವು ಮಹಿಳೆಯರ ಬದುಕಿಗೆ ಜೀವನಾಧಾರವಾಗಿದೆ. ಇಲ್ಲೋರ್ವ ರೈತ ಮಹಿಳೆ ಗೃಹಲಕ್ಷ್ಮೀ ಹಣದಿಂದ ಎತ್ತುಗಳನ್ನು ಖರೀದಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತವಗ ಗ್ರಾಮದ ರೈತ ಮಹಿಳೆ ಬಸವ್ವ ಗೃಹಲಕ್ಷ್ಮೀ ಯೋಜನೆ ಹಣದಿಂದ ಎತ್ತು ಖರೀದಿ ಮಾಡಿದ್ದಾರೆ.

ಬಸವ್ವ ಹಾಗೂ ಶಿವಪ್ಪ ದಂಪತಿಗೆ ಮಕ್ಕಳಿಲ್ಲ. ಎತ್ತುಗಳನ್ನು ಮಕ್ಕಳಂತೆ ಸಾಕುತ್ತಿದ್ದಾರೆ. ಬೇಸಾಯವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ದಂಪತಿಗೆ ಗೃಹಲಕ್ಷ್ಮೀ ಯೋಜನೆ ಹಣದಿಂದ ಅನುಕೂಲವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಸವ್ವ-ಶಿವಪ್ಪ ಮನೆಯಲ್ಲಿ ಒಂದೇ ಎತ್ತು ಇತ್ತು. ಇದೀಗ ಗೃಹಲಕ್ಷ್ಮೀ ಯೋಜನೆಯಿಂದ 22 ಸಾವಿರ ಹಣದಿಂದ ಮತ್ತೊಂದು ಎತ್ತು ಖರ್ದಿ ಮಾಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular