HomeBusiness200 ಯೂನಿಟ್ ಒಳಗಿದ್ದರೆ ಆಗಸ್ಟ್ ನಿಂದ ಫ್ರೀ ಬಿಲ್: ಜುಲೈನಲ್ಲಿ ನೀಡುವ ಬಿಲ್ ಗೆ ಸಂಪೂರ್ಣ...

200 ಯೂನಿಟ್ ಒಳಗಿದ್ದರೆ ಆಗಸ್ಟ್ ನಿಂದ ಫ್ರೀ ಬಿಲ್: ಜುಲೈನಲ್ಲಿ ನೀಡುವ ಬಿಲ್ ಗೆ ಸಂಪೂರ್ಣ ಶುಲ್ಕ

ಬೆಂಗಳೂರು: ಗೃಹಜ್ಯೋತಿ ಯೋಜನೆ ಶನಿವಾರದಿಂದ ಬಳಸುವ ವಿದ್ಯುತ್ ಉಚಿತವಾಗಿರುತ್ತದೆ. ಜುಲೈ 1ರಿಂದ ಗೃಹಜ್ಯೋತಿ ಯೋಜನೆ ಅಡಿ ಗೃಹ ಬಳಕೆದಾರರಿಗೆ ಮಾಸಿಕ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಗೆ ಆಗಸ್ಟ್ ನಲ್ಲಿ ಶೂನ್ಯ ಬಿಲ್ ನೀಡಲಾಗುತ್ತದೆ.

ಜೂನ್ ತಿಂಗಳಲ್ಲಿ ಬಳಕೆ ಮಾಡಿದ ವಿದ್ಯುತ್ ಗೆ ಬಿಲ್ ನೀಡಲಾಗುವುದು. ಆಗಸ್ಟ್ 1ರ ಬಳಿಕ ರೀಡ್ ಮಾಡುವ ಬಿಲ್ ಗೆ ಮಾತ್ರ ಗೃಹಜ್ಯೋತಿ ವಿನಾಯಿತಿ ಅನ್ವಯವಾಗುತ್ತದೆ. ಜುಲೈನಲ್ಲಿ ಯಾವುದೇ ದಿನಾಂಕದಲ್ಲಿ ಬಿಲ್ ನೀಡಿದರೂ ಅದರ ಸಂಪೂರ್ಣ ಶುಲ್ಕವನ್ನು ಗ್ರಾಹಕರು ಪಾವತಿಸಬೇಕು. ಆಗಸ್ಟ್ 1ರ ನಂತರ ರೀಡ್ ಮಾಡುವ ಬಿಲ್ ಗಳನ್ನು ಮಾತ್ರ ಪಾವತಿಸುವಂತಿಲ್ಲ. ಅದಕ್ಕೆ ಮೊದಲಿನ ವಿದ್ಯುತ್ ಬಿಲ್ ಗಳನ್ನು ಪಾವತಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಗದಿಪಡಿಸಿದ ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದಲ್ಲಿ ಹೆಚ್ಚುವರಿ ಯೂನಿಟ್ ಬಳಕೆಯ ಬಿಲ್ ಪಾವತಿಸಬೇಕು. ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಬಾಕಿ ಪಾವತಿಸಿದ ನಂತರ ಸಂಪರ್ಕ ಪಡೆಯಬಹುದು ಎಂದು ಹೇಳಲಾಗಿದೆ.

2022 -23ನೇ ಸಾಲಿನ ಸರಾಸರಿ ವಿದ್ಯುತ್ ಬಳಕೆ ಪ್ರಮಾಣದ ಮೇಲೆ ಶೇಕಡ 10ರಷ್ಟು ವಿದ್ಯುತ್ ಉಚಿತವಾಗಿ ಬಳಕೆ ಮಾಡಬಹುದು. 200 ಯೂನಿಟ್ ಮೀರಿದರೆ ಸಂಪೂರ್ಣ ಶುಲ್ಕ ಪಾವತಿಸಬೇಕು. ಯಾವುದಾದರೂ ಒಂದು ತಿಂಗಳಲ್ಲಿ ಮಾತ್ರ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಆ ನಿಗದಿತ ತಿಂಗಳ ಬಿಲ್ ಮಾತ್ರ ಪೂರ್ಣ ಪಾವತಿಸಬೇಕು. ಮುಂದಿನ ತಿಂಗಳಿಂದ ಗೃಹಜ್ಯೋತಿ ಯೋಜನೆಯ ಸೌಲಭ್ಯ ಮುಂದುವರೆಯುತ್ತದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular