HomeKarnatakaGruha Jyoti Scheme : ಯಾರಿಗೆಲ್ಲಾ ಸಿಗಲಿದೆ ಜುಲೈ ತಿಂಗಳ `ಶೂನ್ಯ ವಿದ್ಯುತ್’ ವಿಲ್? ಇಲ್ಲಿದೆ...

Gruha Jyoti Scheme : ಯಾರಿಗೆಲ್ಲಾ ಸಿಗಲಿದೆ ಜುಲೈ ತಿಂಗಳ `ಶೂನ್ಯ ವಿದ್ಯುತ್’ ವಿಲ್? ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಪ್ರತಿಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಆಗಸ್ಟ್ 5 ರಂದು ಚಾಲನೆ ನೀಡಲಾಗುವುದು, ಜುಲೈ ತಿಂಗಳ ‘ವಿದ್ಯುತ್ ಬಿಲ್’ ಕಟ್ಟಿದ್ರೆ ಅವರಿಗೆ ವಾಪಸ್ ಹಣ ನೀಡುತ್ತೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೂನ್ ತಿಂಗಳಿನ ವಿದ್ಯುತ್ ಬಿಲ್ನಲ್ಲಿ ಜುಲೈ ತಿಂಗಳ ಕೆಲವು ದಿನಗಳ ಶುಲ್ಕ ಕೂಡ ಸೇರ್ಪಡೆಯಾಗಿದ್ದರೆ ಹೆಚ್ಚುವರಿ ದಿನಗಳ ಹಣ ನಿಮಗೆ ಮರುಪಾವತಿಯಾಗಲಿದೆ ಎಂದರು. ಜೂನ್ ತಿಂಗಳ ವಿದ್ಯುತ್ ಬಿಲ್ನಲ್ಲಿ ಸ್ವಲ್ಪ ಗೊಂದಲಗಳಿತ್ತು. ಆ ತಿಂಗಳ ಬಿಲ್ನಲ್ಲಿ ಜುಲೈ ತಿಂಗಳ ಕೆಲವು ದಿನಗಳು ಸೇರಿಕೊಂಡಿವೆ. ಅಂತಹ ಗ್ರಾಹಕರಿಗೆ ಕ್ರೆಡಿಟ್ ಕೊಡುತ್ತೇವೆ. ಬಾಕಿ ಮೊತ್ತ ಇಲ್ಲದಿದ್ದರೆ ನಾಲ್ಕು ತಿಂಗಳ ಬಳಿಕ ಹಣ ಹಿಂದಿರುಗಿಸುತ್ತೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಗಸ್ಟ್ 5 ಕ್ಕೆ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲಾಗುವುದು. ಈಗಾಗಲೇ 1 ಕೋಟಿ ನಲವತ್ತು ಲಕ್ಷ ಕುಟುಂಬಗಳು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಗೃಹಜ್ಯೋತಿ ನೋಂದಣಿಗೆ ಕೊನೆ ದಿನಾಂಕ ಇಲ್ಲವಾದರೂ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬರುವ ಜುಲೈ ತಿಂಗಳ ವಿದ್ಯುತ್ ಬಳಕೆಯ ಬಿಲ್ ಝೀರೋ ಬರಬೇಕಾದರೆ ಅದಕ್ಕಿಂತ ಮೊದಲು ನೋಂದಣಿ ಮಾಡಿಕೊಳ್ಳಬೇಕು. ಅಂತಿಮ ಗಡುವುನೊಳಗೆ ನೋಂದಣಿ ಮಾಡದಿದ್ದರೆ ಎಂದಿನಂತೆ ರೆಗ್ಯೂಲರ್ ಬಿಲ್ ಬರುತ್ತದೆ ಎಂದರು. ಜುಲೈ ಒಂದರಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಿದೆ. ಆದರೆ ಇದಕ್ಕೆ ಅಧಿಕೃತವಾಗಿ ಚಾಲನೆಯನ್ನು ಅಗಸ್ಟ್ 5 ಕ್ಕೆ ನೀಡಲಾಗುತ್ತದೆ ಎಂದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular