HomeKarnatakaBREAKING : ರಾಜ್ಯದ ಜನತೆಗೆ ಉಚಿತ 'ಕರೆಂಟ್ ಭಾಗ್ಯ' : 'ಗೃಹಜ್ಯೋತಿ' ಯೋಜನೆಗೆ ಅಧಿಕೃತ ಚಾಲನೆ

BREAKING : ರಾಜ್ಯದ ಜನತೆಗೆ ಉಚಿತ ‘ಕರೆಂಟ್ ಭಾಗ್ಯ’ : ‘ಗೃಹಜ್ಯೋತಿ’ ಯೋಜನೆಗೆ ಅಧಿಕೃತ ಚಾಲನೆ

ಕಲಬುರಗಿ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ( Gruha  Jyoti) ಯೋಜನೆಗೆ ಸಿಎಂ ಸಿದ್ದರಾಮಯ್ಯ ಇಂದು ಅಧಿಕೃತವಾಗಿ ಚಾಲನೆ ನೀಡಿದರು.

ಕಲಬುರಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಅಧಿಕೃತ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಇಂಧನ ಸಚಿವ ಕೆಜೆ ಜಾರ್ಜ್ ಮತ್ತಿತರರಿದ್ದರು.  ಇದೇ ವೇಳೆ 10 ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್ ವಿತರಣೆ ನೀಡಲಾಗಿತ್ತು.

ಮೊದಲ ತಿಂಗಳಲ್ಲಿ 1.42 ಕೋಟಿ ಕುಟುಂಬಗಳು ಯೋಜನೆಯ ಪ್ರಯೋಜನ ಪಡೆಯಲಿದ್ದು, ಜುಲೈ 27ಕ್ಕೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಜುಲೈ ತಿಂಗಳ ವಿದ್ಯುತ್ ಬಳಕೆಯ ಶುಲ್ಕದಲ್ಲಿ ವಿನಾಯಿತಿ ಸಿಗಲಿದೆ. ಜುಲೈ 27ರ ನಂತರ ಅರ್ಜಿ ಸಲ್ಲಿಸಿದವರಿಗೆ ಆಗಸ್ಟ್ ನಲ್ಲಿ ಪ್ರಯೋಜನ ಸಿಗಲಿದೆ. ಆಗಸ್ಟ್ 1ರಿಂದ ಶೂನ್ಯ ಬಿಲ್ ವಿತರಣೆ ಮಾಡಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜುಲೈ ತಿಂಗಳಿನಲ್ಲಿ ನಿಗದಿತ ವಿದ್ಯುತ್ ಬಳಕೆ ಮಾಡಿದ ಗೃಹಬಳಕೆ ಗ್ರಾಹಕರಿಗೆ ಆ.1 ರಿಂದ ಶೂನ್ಯ ಬಿಲ್ ವಿತರಣೆ ಶುರುವಾಗುತ್ತಿದೆ. ಜುಲೈ 1 ರಿಂದ ಬಳಕೆಯಾದ ಗೃಹಬಳಕೆ ವಿದ್ಯುತ್ ಗೆ ಗ್ರಾಹಕರು ಕಳೆದ ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆ ಆಧರಿಸಿ ಅದಕ್ಕಿಂತ ಶೇಕಡ 10ರಷ್ಟು ಹೆಚ್ಚಿನ ವಿದ್ಯುತ್ ಉಚಿತವಾಗಿ ಪಡೆದುಕೊಳ್ಳಬಹುದು. ಜುಲೈ 27ರೊಳಗೆ ನೋಂದಾಯಿಸಿದ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ.

 

 

 

ಖ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular