HomeLatest Newsಗೃಹಜ್ಯೋತಿ ಫಲಾನುಭವಿಗಳೇ ಗಮನಿಸಿ: ಜುಲೈ ತಿಂಗಳಲ್ಲಿ ಹೊಸ ಬಿಲ್ ಬರಲ್ಲ, ಹಳೆಯ ಬಿಲ್ ಮೇಲೆ ನಿರ್ಧಾರವಾಗಲಿದೆ...

ಗೃಹಜ್ಯೋತಿ ಫಲಾನುಭವಿಗಳೇ ಗಮನಿಸಿ: ಜುಲೈ ತಿಂಗಳಲ್ಲಿ ಹೊಸ ಬಿಲ್ ಬರಲ್ಲ, ಹಳೆಯ ಬಿಲ್ ಮೇಲೆ ನಿರ್ಧಾರವಾಗಲಿದೆ ಮೊತ್ತ!

ಬೆಂಗಳೂರು: ಗೃಹ ಜ್ಯೋತಿ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯಕ್ಕೆ ಬೆಸ್ಕಾಂ ಮೀಟರ್ ರೀಡರ್ ಗಳು ನಿಯೋಜನೆಗೊಂಡಿರುವುದರಿಂದ ಜುಲೈ ತಿಂಗಳ ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ, ಗ್ರಾಹಕರಿಗೆ ಸರಾಸರಿ (Average Bills) ಬಿಲ್ ಗಳನ್ನು ನೀಡಲಾಗುತ್ತದೆ.

ಜುಲೈ ತಿಂಗಳ ಬಿಲ್ಲಿಂಗ್ ಅವಧಿಯಲ್ಲಿ ಗ್ರಾಹಕರಿಗೆ ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧಾರದ ಮೇಲೆ ಸರಾಸರಿ ಬಿಲ್ ನೀಡಲಾಗುವುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಆದರೆ ಎಚ್ ಟಿ ಗ್ರಾಹಕರು, 40 HP ಮತ್ತು ಅದಕ್ಕಿಂತ ಹೆಚ್ಚಿನ ಮಂಜೂರಾದ ಲೋಡ್ ಹೊಂದಿರುವ ಲೋ ಟೆನ್ಷನ್ (LT) ಗ್ರಾಹಕರು, ಸೋಲಾರ್ ರೂಫ್ಟಾಪ್ (SRTPV) ಗ್ರಾಹಕರು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಹಕರಿಗೆ ನೈಜ ಮೀಟರ್ ರೀಡಿಂಗ್ ಆಧಾರದ ಮೇಲೆ ಬಿಲ್ ನೀಡಲಾಗುವುದು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜುಲೈ ತಿಂಗಳ ಸರಾಸರಿ ಬಿಲ್ ಗಳನ್ನು ಗ್ರಾಹಕರಿಗೆ ಎಸ್.ಎಮ್. ಎಸ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗುವುದು. ಗೃಹ ಬಳಕೆದಾರರಿಗೆ ಆಗಸ್ಟ್ ತಿಂಗಳಿನಿಂದ ಯಥಾಪ್ರಕಾರ ನಿಯಮಿತ ಮೀಟರ್ ರೀಡಿಂಗ್ ಮತ್ತು ನೈಜ ವಿದ್ಯುತ್ ಬಳಕೆಯ ಆಧಾರದಮೇಲೆ ಬಿಲ್ ನೀಡಲಾಗುವುದು.

ಸರಾಸರಿ ಬಿಲ್ಲಿಂಗ್ ಅವಧಿಯಲ್ಲಿನ ವ್ಯತ್ಯಾಸದ ಯೂನಿಟ್ಗಳನ್ನು, ನೈಜ ಮೀಟರ್ ರೀಡಿಂಗ್ ಆರಂಭವಾದ ನಂತರ ಮುಂದಿನ ಬಿಲ್ಗಳಲ್ಲಿ ಸೂಕ್ತವಾಗಿ ಹೊಂದಾಣಿಕೆ (Adjust) ಮಾಡಲಾಗುವುದು.

ಗ್ರಾಹಕರು ಜುಲೈ ಬಿಲ್ ನ ಪಾವತಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ಪಾವತಿ ವಿಧಾನಗಳನ್ನು(ಉಪ ವಿಭಾಗದ ನಗದು ಕೌಂಟರ್ ಗಳು, ಬೆಸ್ಕಾಂ ವೆಬ್ ಸೈಟ್, ಬೆಸ್ಕಾಂ ಮಿತ್ರ ಆಪ್ ಹಾಗೂ ಥರ್ಡ್ ಪಾರ್ಟಿ ಆಪ್) ಬಳಸಿಕೊಳ್ಳಬಹುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular