ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಚಲಿಸುವ ರೈಲಿನ ಮೇಲೆ ನಿಂತು ಇಬ್ಬರು ಯುವಕರು ಅಪಾಯಕಾರಿ ಸ್ಟಂಟ್ ಮಾಡುವ ವಿಡಿಯೋ ವೈರಲ್ ಆಗಿದೆ.
ವೀಡಿಯೊದಲ್ಲಿ ಒಳ ಉಡುಪು ಧರಿಸಿದ ಇಬ್ಬರು ಯುವಕರು ಚಲಿಸುವ ಗೂಡ್ಸ್ ರೈಲಿನಲ್ಲಿ ನಿಂತು ತಮ್ಮ ದೇಹವನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ.
ಶರ್ಟ್ ರಹಿತವಾಗಿ ನಿಂತಿರುವ ಯುವಕರು ತಮ್ಮ ಬೈಸೆಪ್‌ಗಳೊಂದಿಗೆ ಪೋಸ್ ನೀಡಿದ್ದಾರೆ. ಇವರಿಬ್ಬರು ನಡೆಸಿದ ಅಪಾಯಕಾರಿ ಸಾಹಸ ಕಂಡ ನೆಟ್ಟಿಗರು ಅಧಿಕಾರಿಗಳ ಗಮನ ಸೆಳೆದು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಗೌತಮ್ ಬುದ್ಧ ನಗರದ ಜಾರ್ಚಾ ಗ್ರಾಮದ ಎನ್‌ಟಿಪಿಸಿ ಸ್ಥಾವರದ ಬಳಿ ಈ ಘಟನೆಯನ್ನು ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ.
https://twitter.com/imrajni_singh/status/1671840144129654786?ref_src=twsrc%5Etfw%7Ctwcamp%5Etweetembed%7Ctwterm%5E1671840144129654786%7Ctwgr%5Eeff7b39188fc7a71b5334f1eb68dc294270ff789%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fgreaternoida2seminakedmenperformriskystuntsonmovingtraininviralvideowatch-newsid-n511971260