ಶಿವಮೊಗ್ಗ: ಜಗಳ ಬಿಡಿಸಲು ಹೋಗಿ ಅಪ್ರಾಪ್ತರಿಂದ ಭೀಕರವಾಗಿ ಕೊಲೆಯಾಗಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿ ಸಂಕೇತ್ ಸಮಾಧಿ ಧ್ವಂಸಗೊಳಿಸಿದ್ದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.
ಸಂಕೇತ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿಗಳ ಅಪ್ರಾಪ್ತ ಸ್ನೇಹಿತ ಕೃತ್ಯವೆಸಗಿರುವುದು ಗೊತ್ತಾಗಿದೆ. ಫೆಬ್ರವರಿ 23ರಂದು ಸ್ನೇಹಿತರ ಗಲಾಟೆ ನಡೆಯುವಾಗ ಜಗಳ ಬಿಡಿಸಲು ಹೋಗಿದ್ದ ಸಂಕೇತ್ ನನ್ನು ಅಪ್ರಾಪ್ತರು ಭೀಕರವಾಗಿ ಥಳಿಸಿ ಹತ್ಯೆ ಮಾಡಿದ್ದರು. ನಂತರ ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ಪೋಷಕರು ಸಂಕೇತ್ ಅಂತ್ಯಕ್ರಿಯೆ ನೆರವೇರಿಸಿದ್ದರು.
ಪುತ್ರನ ಮಗನ ನೆನಪಿಗಾಗಿ ಮಾರ್ಚ್ 26 ರಂದು ಸಮಾಧಿ ನಿರ್ಮಿಸಲಾಗಿತ್ತು. ಮಾರ್ಚ್ 31 ರಂದು ಮೃತ ಬಾಲಕ ಸಂಕೇತ್ ಸಮಾಧಿಯನ್ನು ದ್ವಂಸಗೊಳಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

