HomeKarnatakaBREAKING NEWS: ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಮಗನ ಬರ್ಬರ ಹತ್ಯೆ; ಶವ ಚರಂಡಿಯಲ್ಲಿ ಬಿಸಾಕಿ...

BREAKING NEWS: ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಮಗನ ಬರ್ಬರ ಹತ್ಯೆ; ಶವ ಚರಂಡಿಯಲ್ಲಿ ಬಿಸಾಕಿ ಹೋದ ದುಷ್ಕರ್ಮಿಗಳು

ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರ ಪುತ್ರನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಚರಂಡಿಗೆ ಬಿಸಾಕಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಇಲ್ಲಿನ ಮರಸನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಹಾರೋಬಂಡೆ ಗ್ರಾಮದ 30 ವರ್ಷದ ಮಾರುತೇಶ್ ಕೊಲೆಯಾಗಿರುವ ದುರ್ದೈವಿ. ಮಾರುತೇಶ್ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ. ಇಂದು ಮರಸನಹಳ್ಳಿ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ದುಷ್ಕರ್ಮಿಗಳು ಆತನನ್ನು ಬರ್ಬರವಾಗಿ ಕೊಂದು, ಶವವನ್ನು ಚರಂಡಿಗೆ ಎಸೆದು ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular