HomeIndiaನೌಕರರಿಗೆ ಶಾಕಿಂಗ್ ನ್ಯೂಸ್: ಏರಿಕೆಯಾಗದ ಜಿಪಿಎಫ್ ಬಡ್ಡಿ ದರ ಯಥಾಸ್ಥಿತಿಯಲ್ಲೇ ಮುಂದುವರಿಕೆ

ನೌಕರರಿಗೆ ಶಾಕಿಂಗ್ ನ್ಯೂಸ್: ಏರಿಕೆಯಾಗದ ಜಿಪಿಎಫ್ ಬಡ್ಡಿ ದರ ಯಥಾಸ್ಥಿತಿಯಲ್ಲೇ ಮುಂದುವರಿಕೆ

ನವದೆಹಲಿ: ಜನರಲ್ ಪ್ರಾವಿಡೆಂಟ್ ಫಂಡ್(ಜಿಪಿಎಫ್) ಬಡ್ಡಿ ದರವನ್ನು ಕೇಂದ್ರ ಹಣಕಾಸು ಸಚಿವಾಲಯ ಯಥಾಸ್ಥಿತಿಯಲ್ಲಿ ಮುಂದುವರೆಸಿದ್ದು, ಇದರಿಂದಾಗಿ ಬಡ್ಡಿ ದರ ಏರಿಕೆ ನಿರೀಕ್ಷೆಯಲ್ಲಿದ್ದ ನೌಕರರಿಗೆ ನಿರಾಸೆಯಾಗಿದೆ.

ಅಕ್ಟೋಬರ್ -ಡಿಸೆಂಬರ್ ತ್ರೈಮಾಸಿಕ ಅವಧಿಗೆ ಜಿಪಿಎಫ್ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿದೆ. ಕಳೆದ ಹಲವು ತ್ರೈಮಾಸಿಕಗಳಿಂದ ಜಿಪಿಎಫ್ ಬಡ್ಡಿ ದರ ಶೇಕಡ 7.1 ರಷ್ಟೇ ಮುಂದುವರೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇಂದ್ರ ಸರ್ಕಾರ ನೌಕರರು ಜಿಪಿಎಫ್ ಬಡ್ಡಿ ಏರಿಕೆಯ ನಿರೀಕ್ಷೆಯಲ್ಲಿದ್ದರು. ಹಣಕಾಸು ಸಚಿವಾಲಯ ಯಥಾಸ್ಥಿತಿಯಲ್ಲಿ ಬಡ್ಡಿ ದರ ಮುಂದುವರೆಸಿರುವುದರಿಂದ ನೌಕರರ ವಲಯಕ್ಕೆ ನಿರಾಸೆಯಾಗಿದೆ. ಪಿಪಿಎಫ್ ಮಾದರಿಯ ಯೋಜನೆಯಾಗಿರುವ ಜಿಪಿಎಫ್ ಕೇಂದ್ರ ಸರ್ಕಾರದ ನೌಕರರಿಗೆ ಅನ್ವಯವಾಗುತ್ತದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular