HomeKarnatakaBIG NEWS: ಹಬ್ಬಕ್ಕೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್: ಟಿಕೆಟ್ ಬುಕ್ಕಿಂಗ್ ಗೆ ಸ್ಪೆಷಲ್ ರಿಯಾಯಿತಿ...

BIG NEWS: ಹಬ್ಬಕ್ಕೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್: ಟಿಕೆಟ್ ಬುಕ್ಕಿಂಗ್ ಗೆ ಸ್ಪೆಷಲ್ ರಿಯಾಯಿತಿ ಘೋಷಿಸಿದ NWKSRTC

ಹುಬ್ಬಳ್ಳಿ: ಗೌರಿ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚು. ಪ್ರಯಾಣಿಕರ ಅನುಕೂಲಕ್ಕಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ವಿಶೇಷ ಆಫರ್ ಘೋಷಿಸಿದೆ.

ಹಬ್ಬದ ಸಂದರ್ಭದಲ್ಲಿ ಊರುಗಳಿಗೆ ತೆರಳುವವರಿಗೆ ಹಾಗೂ ಹಬ್ಬ ಮುಗಿಸಿ ವಾಪಾಸ್ ಆಗುವ ಪ್ರಯಾಣಿಕರಿಗಾಗಿ NWKSRTC ಸೆಪ್ಟೆಂಬರ್ 5ರಿಂದ ಸೆಪ್ಟೆಂಬರ್ 10ರವರೆಗೆ ವಿಶೇಷ ರಿಯಾಯಿತಿ ದರದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಿದೆ. ಅಲ್ಲದೇ ವಿವಿಧ ಊರುಗಳಿಗೆ ವಿಶೆಷ ಬಸ್ ವ್ಯವಸ್ಥೆಯನ್ನೂ ಕಲ್ಪಿಸಿದೆ.

ಬೆಂಗಳೂರು, ಪುಣೆ, ಹೈದರಾಬಾದ್ ನಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಿಗೆ ವಿಶೇಷ ಬಸ್ ಸಂಚರಿಸಲಿವೆ. ಅಲ್ಲದೇ NWKSRTCಯಲ್ಲಿ ಸೀಟು ಬಿಕ್ಕಿಂಗ್ ಗೆ ವಿಶೇಷ ಆಫರ್ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಬ್ಬದ ಸಂದರ್ಭದಲ್ಲಿ ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚು ಪ್ರಯಾಣಿಕರು ಒಂದೇಬಾರಿಗೆ ಸೀಟು ಕಾಯ್ದಿರುವುದಾದರೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular