HomeIndiaಮತದಾರರಿಗೆ ಮುಖ್ಯ ಮಾಹಿತಿ: ವೋಟರ್ ಲಿಸ್ಟ್ ಗೆ ಜನ್ಮ, ಮರಣ ದಿನಾಂಕ ದತ್ತಾಂಶ ಜೋಡಣೆ ಮಸೂದೆ...

ಮತದಾರರಿಗೆ ಮುಖ್ಯ ಮಾಹಿತಿ: ವೋಟರ್ ಲಿಸ್ಟ್ ಗೆ ಜನ್ಮ, ಮರಣ ದಿನಾಂಕ ದತ್ತಾಂಶ ಜೋಡಣೆ ಮಸೂದೆ ಜಾರಿ ಶೀಘ್ರ

ನವದೆಹಲಿ: ಮತದಾರರ ಪಟ್ಟಿಗೆ ಜನ್ಮ ದಿನಾಂಕ, ಮರಣ ದಿನಾಂಕ ದತ್ತಾಂಶ ಜೋಡಣೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಜನಗಣತಿ ಆಯುಕ್ತರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಗೆ ಜನ್ಮ ದಿನಾಂಕ ಮತ್ತು ಮರಣ ದಿನಾಂಕ ದತ್ತಾಂಶ ಲಿಂಕ್ ಮಾಡುವ ಪ್ರಕ್ರಿಯೆ ನಡೆದಿದ್ದು, ಈ ಸಂಬಂಧ ಶೀಘ್ರವೇ ಮಸೂದೆ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮತದಾರರ ಪಟ್ಟಿಗೆ ಜನ್ಮದಿನ ದತ್ತಾಂಶ ಜೋಡಿಸಿದಾಗ ವ್ಯಕ್ತಿಗೆ 18 ವರ್ಷವಾದಾಗ ತನ್ನಿಂದ ತಾನೇ ಆತನ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆಯಾಗುತ್ತದೆ. ಅದೇ ರೀತಿ ವ್ಯಕ್ತಿ ನಿಧನರಾದ ಸಂದರ್ಭದಲ್ಲಿ ಆತನ ಮರಣ ಪ್ರಮಾಣ ಪತ್ರ ಸಿದ್ಧವಾದಾಗ ಚುನಾವಣೆ ಆಯೋಗಕ್ಕೆ ಮಾಹಿತಿ ಲಭ್ಯವಾಗಿ ತನ್ನಿಂದ ತಾನೇ ಹೆಸರು ಮತದಾರರ ಪಟ್ಟಿಯಿಂದ ಅಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular