HomeKarnatakaಬಾದಾಮಿ ಜನ ಗೋ ಬ್ಯಾಕ್ ಅಂದಿದ್ರೆ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯಾಗಿಯೇ ಇರಬೇಕಿತ್ತು: ಕಾರಜೋಳ ಟಾಂಗ್

ಬಾದಾಮಿ ಜನ ಗೋ ಬ್ಯಾಕ್ ಅಂದಿದ್ರೆ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯಾಗಿಯೇ ಇರಬೇಕಿತ್ತು: ಕಾರಜೋಳ ಟಾಂಗ್

ಚಿತ್ರದುರ್ಗ: ಬಾದಾಮಿ ಕ್ಷೇತ್ರದ ಜನ ಗೋ ಬ್ಯಾಕ್ ಎಂದು ಹೇಳಿದ್ದರೆ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯಾಗಿಯೇ ಇರಬೇಕಿತ್ತು ಎಂದು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಂತ ಕ್ಷೇತ್ರದಲ್ಲಿಯೇ ಸಿದ್ಧರಾಮಯ್ಯ ಹೀನಾಯವಾಗಿ ಸೋತಿದ್ದರು. ಅವರಿಗೆ ಮರುಜನ್ಮ ನೀಡಿದ್ದು ಬಾದಾಮಿ ಕ್ಷೇತ್ರದ ಜನ. ಅಂದು ಅವರಿಗೆ ಬಾದಾಮಿಯ ಜನ ನೀವು ಹೊರಗಿನವರು ಗೋ ಬ್ಯಾಕ್ ಎಂದು ಹೇಳಿ ಸೋಲಿಸಿದ್ದರೆ ಸಿದ್ದರಾಮಯ್ಯ ಮಾಜಿ ಸಿಎಂ ಎಂದು ಬೋರ್ಡು ಹಾಕಿಕೊಳ್ಳಬೇಕಿತ್ತು ಎಂದು ಟಾಂಗ್ ಕೊಟ್ಟಿದ್ದಾರೆ.

ಏಪ್ರಿಲ್ 4ರಂದು ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಚಿತ್ರದುರ್ಗಕ್ಕೆ ಬಿಜೆಪಿಯವರು ವಿಜಯಪುರ ಜಿಲ್ಲೆಯಿಂದ ಗೋವಿಂದ ಕಾರಜೋಳ ಕಾರಜೋಳ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. ಅವರನ್ನು ಚುನಾವಣೆಯನ್ನು ಸೋಲಿಸಿ ಪುನಃ ಅವರ ಜಿಲ್ಲೆಗೆ ವಾಪಸ್ ಕಳುಹಿಸಿ. ಮಿಸ್ಟರ್ ಕಾರಜೋಳ್ ಪ್ಲೀಸ್ ಗೋ ಬ್ಯಾಕ್ ಎಂದು ಚಿತ್ರದುರ್ಗ ಜನತೆ ಒಕ್ಕೊರಲಿನಿಂದ ಹೇಳಬೇಕು ಎಂದು ಕರೆ ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಕ್ಕೆ ಕಾರಜೋಳ ತಿರುಗೇಟು ನೀಡಿ, ಬಾದಾಮಿ ಜನ ಗೋ ಬ್ಯಾಕ್ ಸಿದ್ದರಾಮಯ್ಯ ಅಂದಿದ್ದರೆ ಮಾಜಿ ಮುಖ್ಯಮಂತ್ರಿಯಾಗಿಯೇ ಇರಬೇಕಿತ್ತು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular