BIG NEWS: ರಾಜ್ಯಪಾಲ ಗೆಹ್ಲೋಟ್ ಭಾಗಿಯಾಗಿದ್ದ ಸಮಾರಂಭದಲ್ಲಿ ಕಳ್ಳತನ; ವಜ್ರದ ಕಿವಿಯೋಲೆ ಕದ್ದೊಯ್ದ ಕಳ್ಳ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹಾಡ ಹಗಲೇ ಚಿನ್ನಾಭರಣ ಮಳಿಗೆಗಳಿಗೆ ನುಗ್ಗಿ ಕೆಜಿಗಟ್ಟಲೇ ಆಭರಣ ಕದ್ದೊಯ್ದ ಘಟನೆ ಮಾಸುವ ಮುನ್ನವೇ ಇದೀಗ ರಾಜ್ಯಪಾಲರು ಭಾಗಿಯಾಗಿದ್ದ ಸಮಾರಂಭವೊಂದರಲ್ಲೇ ಕಳ್ಳ ತನ್ನ ಕೈಚಳಕ ತೋರಿರುವ ಘಟನೆ ನಡೆದಿದೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿದ್ದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಕಳ್ಳತನ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಹಾಗಾಗಿ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು. ರಾಜ್ಯಪಾಲರ ಕಾರ್ಯಕ್ರಮ ಅದೂ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿದ್ದ ಸಮಾರಂಭ ಅಂದಮೇಲೆ ಭದ್ರತೆಗೆ ಕೊರತೆಯಿರಲ್ಲ. ಇಷ್ಟೆಲ್ಲ ಸೆಕ್ಯುರಿಟಿಗಳಿದ್ದರೂ ಕಳ್ಳ ಆರಾಮವಾಗಿಯೇ ಹೋಟೆಲ್ ನೊಳಗೆ ನುಗ್ಗಿ ಮಹಿಳೆಯ ವಜ್ರದೋಲೆ, ಹಣ ದೋಚಿ ಎಸ್ಕೇಪ್ ಆಗಿದ್ದಾನೆ.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಂಜಿತಾ ಎಂಬುವವರ ಪರ್ಸ್ ಕಳ್ಳ ಕದ್ದೊಯ್ದಿದ್ದಾನೆ. ಪರ್ಸ್ ನಲ್ಲಿ 10,000 ರೂಪಾಯಿ ಹಣ, ವಜ್ರದ ಕಿವಿಯೋಲೆ ಇತ್ತು ಎಂದು ತಿಳಿದುಬಂದಿದೆ. ಖತರ್ನಾಕ್ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read