ಬೆಂಗಳೂರು : ಹಿಂದೂ ನೌಕರರು ಉಪವಾಸ ಆಚರಣೆಗೆ ರಜೆ ಕೇಳಿದ್ರೆ ಸರ್ಕಾರಿ ಕಚೇರಿಗಳೇ ಖಾಲಿ ಆಗುತ್ತೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ರಂಜಾನ್ ಉಪವಾಸದ ವೇಳೆ ನೌಕರರಿಗೆ 1 ಗಂಟೆ ರಿಲೀಫ್ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎ.ಹುಸೇನ್ ಮನವಿ ಮಾಡಿದ್ದಾರೆ, ಈ ಕುರಿತು ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ.
ಹಿಂದೂಗಳು ಕೂಡ ಶಿವರಾತ್ರಿ ಸೇರಿದಂತೆ ಅನೇಕ ಹಬ್ಬಗಳಲ್ಲಿ ಉಪವಾಸ ಮಾಡ್ತಾರೆ, ಅದಕ್ಕೂ ಅವಕಾಶ ನೀಡ್ತಾರಾ? ಶುಕ್ರವಾರದ ನಮಾಜ್ಗೂ ಅವಕಾಶ ಕೊಡಿ ಅಂತ ಕೇಳ್ತಾರೆ. ಇದಕ್ಕೆಲ್ಲ ಸರ್ಕಾರ ಅನುಮತಿ ನೀಡಬಾರದು ನೀಡಿದ್ರೇ ಹೋರಾಟ ಮಾಡಬೇಕಾಗುತ್ತೆ, ಹಿಂದೂ ನೌಕರರು ಉಪವಾಸ ಆಚರಣೆಗೆ ರಜೆ ಕೇಳಿದ್ರೆ ಸರ್ಕಾರಿ ಕಚೇರಿಗಳೇ ಖಾಲಿ ಆಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

