HomeKarnatakaಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಬಿಸಿಯೂಟಕ್ಕೆ ಫ್ರೆಶ್ ತರಕಾರಿಗೆ ಶಾಲೆಗಳಲ್ಲಿ ‘ಪೌಷ್ಟಿಕವನ’ ಕೈತೋಟ ಬೆಳೆಸಲು ಸರ್ಕಾರ...

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಬಿಸಿಯೂಟಕ್ಕೆ ಫ್ರೆಶ್ ತರಕಾರಿಗೆ ಶಾಲೆಗಳಲ್ಲಿ ‘ಪೌಷ್ಟಿಕವನ’ ಕೈತೋಟ ಬೆಳೆಸಲು ಸರ್ಕಾರ ಸೂಚನೆ

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪೌಷ್ಟಿಕ ವನ ಕೈತೋಟ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.

ಶಾಲೆಗಳಲ್ಲಿ ನಿತ್ಯದ ಬಿಸಿಯೂಟದಲ್ಲಿ ಬಳಸುವ ಸೊಪ್ಪು, ತರಕಾರಿಯನ್ನು ಶಾಲಾ ಅವರಣದಲ್ಲಿ ಕೈತೋಟ ಬೆಳೆಸುವ ಮೂಲಕ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಪೌಷ್ಟಿಕ ವನ ನಿರ್ಮಾಣ ಮಾಡಿ ವಿವಿಧ ತರಕಾರಿ, ಸೊಪ್ಪು, ಹಣ್ಣುಗಳನ್ನು ಬೆಳೆದು ಶಾಲೆಯ ನಿತ್ಯ ಬಿಸಿಯೂಟದಲ್ಲಿ ಬಳಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳೀಯ ಸಂಸ್ಥೆಗಳು, ದಾನಿಗಳು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆಗಳ ಸ್ಥಳೀಯ ಕಚೇರಿ ಸಂಪರ್ಕಿಸಿ ಅವರ ನೆರವು, ಮಾರ್ಗದರ್ಶನದೊಂದಿಗೆ ಪೌಷ್ಟಿಕ ವನ ನಿರ್ಮಾಣ ಮಾಡಬೇಕು ಎಂದು ಪಿಎಂ ಪೋಷಣ್ ನಿರ್ದೇಶಕರು ಶಾಲೆಗಳಿಗೆ ಸೂಚನೆ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular