HomeKarnatakaBig News: ಸರ್ಕಾರಿ ನೌಕರರ ಜನ್ಮ ದಿನಾಂಕ ಬದಲಾವಣೆಗೆ ಹೊಸ ನಿಯಮ

Big News: ಸರ್ಕಾರಿ ನೌಕರರ ಜನ್ಮ ದಿನಾಂಕ ಬದಲಾವಣೆಗೆ ಹೊಸ ನಿಯಮ

ಸರ್ಕಾರಿ ಕೆಲಸ ಸಿಗಬೇಕು ಎಂಬುದು ಬಹಳಷ್ಟು ಯುವ ಜನರ ಕಸಸು. ಆದರೆ ಸರ್ಕಾರಿ ನೌಕರಿಗೆ ಸೇರಿದ ಮೇಲೆ ಹಲವು ನೌಕರರು ತಮ್ಮ ಹುಟ್ಟಿದ ದಿನಾಂಕ ಬದಲಾವಣೆ ಮಾಡುತ್ತಾರೆ. ಈ ಮೂಲಕ ಹೆಚ್ಚು ಕಾಲ ಸೇವೆಯಲ್ಲಿಯೇ ಮುಂದುವರೆಯಲು ಬಯಸುತ್ತಾರೆ. ಈಗ ಕರ್ನಾಟಕ ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

ಸರ್ಕಾರಿ ಸೇವೆಗೆ ಸೇರಿದ ಬಳಿಕ ನೌಕರರು ಅಫಿಡೆವಿಟ್ ಸಲ್ಲಿಸುವ ಮೂಲಕ ತಮ್ಮ ಹುಟ್ಟಿದ ದಿನಾಂಕ ಬದಲಿಸುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಸರ್ಕಾರ ಹೊಸ ಕಾನೂನು ಜಾರಿಗೆ ತರಲಿದೆ. ಈ ಕುರಿತು ತಯಾರಿ ನಡೆಯುತ್ತಿದ್ದು, 2026ರ ಮುಂಗಾರು ಅಧಿವೇಶನದಲ್ಲಿಯೇ ಮಸೂದೆ ಮಂಡಿಸುವ ನಿರೀಕ್ಷೆ ಇದೆ.

ಸದ್ಯ 1947ರಲ್ಲಿ ಜಾರಿಗೊಳಿಸಿದ ಕಾಯ್ದೆ ಪ್ರಕಾರ ಸರ್ಕಾರಿ ನೌಕರರ ವಯಸ್ಸನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಈ ಕಾಯ್ದೆಯನ್ನು ರದ್ದುಗೊಳಿಸಲು 2026ರಲ್ಲಿ ಹೊಸ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ತಯಾರಿಯನ್ನು ನಡೆಸುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಯಸ್ಸು ದೃಢೀಕರಣಕ್ಕೆ ಹೊಸ ವಿಧೇಯಕ ಮಂಡನೆಯಾಗಲಿದೆ. ಮಸೂದೆಯನ್ನು ಉಭಯ ಸದನದಲ್ಲಿ ಮಂಡಿಸಿ, ಒಪ್ಪಿಗೆ ಪಡೆದು ಈ ವರ್ಷವೇ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಅದಕ್ಕೂ ಮೊದಲು ಸಚಿವ ಸಂಪುಟ ಸಭೆಯಲ್ಲಿ ಹೊಸ ನೀತಿಯ ಕರಡು ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ.

ಸರ್ಕಾರಿ ನೌಕರರ ವಯೋಮಿತಿ ಹೆಚ್ಚಳದ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ಸರ್ಕಾರ ವಿವಿಧ ಇಲಾಖೆಗಳ ಹುದ್ದೆಗಳನ್ನು ಭರ್ತಿ ಮಾಡಲು ವಿಳಂಬ ಮಾಡುವ ಕಾರಣ ಅಭ್ಯರ್ಥಿಗಳು ಸರ್ಕಾರಿ ಸೇವೆಗೆ ಸೇರುವುದೇ ತಡವಾಗುತ್ತಿದೆ. ಹೆಚ್ಚು ದಿನ ಸೇವೆಯಲ್ಲಿ ಮುಂದುವರೆಯಲು ಹುಟ್ಟಿದ ದಿನಾಂಕ ಬದಲಾವಣೆ ಮಾಡಿಕೊಳ್ಳುತ್ತಾರೆ.

ಹೊಸ ನೀತಿಯ ಅನ್ವಯ ಒಬ್ಬ ಅಭ್ಯರ್ಥಿ ಸರ್ಕಾರಿ ಸೇವೆಗೆ ಸೇರಿದ ಬಳಿಕ ತಮ್ಮ ಜನ್ಮ ದಿನಾಂಕ ಬದಲಾವಣೆ ಮಾಡಿಕೊಳ್ಳಲು ಅವಕಾಶವಿಲ್ಲ. ಯಾವುದೇ ಅಫಿಡೆವಿಟ್ ಸಲ್ಲಿಕೆ ಮಾಡಿದರೂ ಸಹ ಸೇವಾ ಪುಸ್ತಕದಲ್ಲಿ ದಾಖಲಾದ ಜನ್ಮ ದಿನಾಂಕವನ್ನು ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ.

ಸರ್ಕಾರ Karnataka State servants determination of age bill 2026  ಎಂಬ ಹೆಸರಿನಲ್ಲಿ ವಿಧೇಯಕ ಮಂಡನೆ ಮಾಡಲಿದೆ. ಸರ್ಕಾರಿ ನೌಕರ ಸೇವೆಗೆ ಸೇರಿದ ಬಳಿಕ ಯಾವುದೇ ಕೋರ್ಟ್, ಪ್ರಾಧಿಕಾರದ ಮುಂದೆ ಜನ್ಮ ದಿನಾಂಕ ಬದಲಾವಣೆ ಮಾಡುವಂತೆ ಮನವಿ ಸಲ್ಲಿಕೆ ಮಾಡಲು ಸಹ ಅವಕಾಶ ಇರುವುದಿಲ್ಲ.

ಒಮ್ಮೆ ಸೇವೆಗೆ ಸೇರುವಾಗ ನೋಂದಣಿ ಮಾಡಿಸಿದ ಜನ್ಮ ದಿನಾಂಕವೇ ಅಂತಿಮವಾಗಲಿದೆ. ವಯೋಮಿತಿ ಪೂರ್ಣಗೊಳ್ಳುತ್ತಿದ್ದಂತೆಯೇ ನಿವೃತ್ತಿ ಹೊಂದಬೇಕಾಗುತ್ತದೆ. ಈ ಮಸೂದೆಯಲ್ಲಿರುವ ಪ್ರಮುಖ ಅಂಶಗಳು ಏನು? ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಆದರೆ ಈ ವರ್ಷವೇ ಇದನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

ಸದ್ಯ ಸರ್ಕಾರಿ ನೌಕರರ ವಯೋನಿವೃತ್ತಿ 58 ವರ್ಷಗಳಿಗೆ ಆಗುತ್ತದೆ. ಆದರೆ ಹಲವು ಬಾರಿ ನಿವೃತ್ತಿ ವಯೋಮಿತಿಯನ್ನು 60 ವರ್ಷಗಳಿಗೆ ಏರಿಕೆ ಮಾಡಲಾಗುತ್ತದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಸರ್ಕಾರ ಇದನ್ನು ತಳ್ಳಿಹಾಕುತ್ತಲೇ ಇದೆ. ಈ ನಡುವೆ ಜನ್ಮ ದಿನಾಂಕ ಬದಲಾವಣೆ ಮಾಡಲಾಗದ ನಿಯಮ ಜಾರಿಗೊಳಿಸಲು ಹೊರಟಿದೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಹಲವು ಬೇಡಿಕೆಯನ್ನು ಈಗಾಗಲೇ ಈಡೇಸಿಸಿದೆ. ನೌಕರರ ಬೇಡಿಕೆಯಂತೆ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಿದೆ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿದೆ. ಹಳೆ ಪಿಂಚಣಿ ಯೋಜನೆ ಮರು ಅನುಷ್ಠಾನದ ಕುರಿತು ಸಹ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular