ಹತ್ತಾರು ಕಾಯಿಲೆಗಳಿಗೆ ರಾಮಬಾಣ ಸೋರೆಕಾಯಿ

ಬೇಸಿಗೆಯಲ್ಲಿ ವಿಪರೀತ ಸೆಖೆ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಸೆಖೆಗಾಲದಲ್ಲಿ ಡಿಹೈಡ್ರೇಶನ್‌ ಕಾಮನ್.‌ ಜೊತೆಗೆ ಸದಾ ಆಯಾಸದ ಅನುಭವವಾಗುತ್ತಿರುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಸೂಕ್ತವಾದ ಆಹಾರ ಮತ್ತು ಪಾನೀಯವನ್ನು ಸೇವನೆ ಮಾಡಬೇಕು.

ಬೇಸಿಗೆಯಲ್ಲಿ ಸೋರೆಕಾಯಿ ತುಂಬಾ ಪ್ರಯೋಜನಕಾರಿ. ಸೋರೆಕಾಯಿಯನ್ನು ಭಾರತದಲ್ಲಿ ಅತ್ಯಂತ ರುಚಿಕರವಾದ ತರಕಾರಿಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಇದು ದೇಹಕ್ಕೆ ಬೇಕಾದ ತೇವಾಂಶವನ್ನು ಒದಗಿಸುತ್ತದೆ. ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳು ಸೋರೆಕಾಯಿಯಲ್ಲಿವೆ. ಸೋರೆಕಾಯಿ ಮಲಬದ್ಧತೆ, ಗ್ಯಾಸ್ಟ್ರಿಕ್‌ ಪೈಲ್ಸ್ ತಡೆಯಲು ಸಹಾಯ ಮಾಡುತ್ತದೆ.

ಸೋರೆಕಾಯಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಕೂಡ ಇದು ಸಹಾಯ ಮಾಡುತ್ತದೆ. ಸೋರೆಕಾಯಿಯಲ್ಲಿರುವ ವಿಟಮಿನ್, ಮಿನರಲ್ಸ್ ಮತ್ತು ಡಯೆಟರಿ ಫೈಬರ್ ದೇಹವನ್ನು ಚೆನ್ನಾಗಿ ಪೋಷಿಸುತ್ತದೆ ಮತ್ತು ಅನಗತ್ಯ ಹಸಿವನ್ನು ತಡೆಯುತ್ತದೆ.

ಸೋರೆಕಾಯಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವ ಸೋಡಿಯಂ, ಪೊಟ್ಯಾಸಿಯಮ್ ಮತ್ತು ಅಗತ್ಯವಾದ ಖನಿಜಗಳ ಅಂಶಗಳನ್ನು ಸಹ ಒಳಗೊಂಡಿದೆ. ಕಬ್ಬಿಣದ ಅಂಶಗಳು, ವಿಟಮಿನ್ ಬಿ ಮತ್ತು ಸಿ ಕೂಡ ಇದರಲ್ಲಿ ಸಮೃದ್ಧವಾಗಿದೆ. ಉತ್ಕರ್ಷಣ ನಿರೋಧಕವಾಗಿ ಇದು ಕೆಲಸ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read