Watch Video | ಭಾರತೀಯ ಗಾಯಕನಿಂದ ತಾಯಂದಿರಿಗೆ ಭಾವಪೂರ್ಣ ನುಡಿನಮನ

ಈ ವರ್ಷ ಮಾರ್ಚ್ 19ರಂದು ಲಂಡನ್‌ನಲ್ಲಿ ತಾಯಂದಿರ ದಿನಾಚರಣೆ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಲಂಡನ್‌ನ ಬೀದಿಬೀದಿಗಳಲ್ಲಿ ತಾಯಂದಿರಿಗೆ ನಮನ ಸಲ್ಲಿಸಲು ಮುಂದಾದ ಭಾರತೀಯ ವಾದಕನೊಬ್ಬ 2007ರ ಬಾಲಿವುಡ್ ಹಿಟ್ ’ತಾರೇ ಜ಼ಮೀನ್ ಪರ್‌’ ಚಿತ್ರದ ’ಮಾ’ ಹಾಡನ್ನು ಹಾಡಿದ್ದಾರೆ.

ವಿಶ್ ಹೆಸರಿನ ಈ ಗಾಯಕ ಇ‌ನ್‌ಸ್ಟಾಗ್ರಾಂನಲ್ಲಿರುವ ತನ್ನ ಖಾತೆಯಲ್ಲಿ ತಾವು ಈ ಹಾಡನ್ನು ಹಾಡುತ್ತಿರುವ ವಿಡಿಯೋ ಶೇರ್‌ ಮಾಡಿದ್ದಾರೆ.

“ಈ ಹಾಡನ್ನು ಎಲ್ಲರೂ ಅದೆಷ್ಟು ಸುಂದರವಾಗಿ ಜೊತೆಯಾಗಿ ಹಾಡಿದ್ದಾರೆ. ವಿದೇಶದಲ್ಲಿ ಬದುಕುವುದು ಅದೆಷ್ಟು ಕಷ್ಟ. ಅದರಲ್ಲೂ ವಿದ್ಯಾರ್ಥಿಗಳಾಗಿ ಇಲ್ಲಿಗೆ ಬಂದವರಿಗೆ. ನನ್ನ ಈ ಪಯಣದಲ್ಲಿ ನನಗೆ ಬೆಂಬಲ ಕೊಟ್ಟ ನನ್ನ ತಾಯಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಬ್ರಿಟನ್‌ನಲ್ಲಿ ಮಾರ್ಚ್ 19ರಂದು ತಾಯಂದಿರ ದಿನವಾಗಿದೆ. ದಯವಿಟ್ಟು ನಿಮ್ಮ ತಾಯಂದಿರಿಗೆ ಕರೆ ಮಾಡಿ ಅವರು ಹೇಗಿದ್ದಾರೆಂದು ವಿಚಾರಿಸಿ. ನಿನ್ನೆ ಆಗಮಿಸಿದ್ದಕ್ಕೆ ಧನ್ಯವಾದ. ಎಲ್ಲರಿಗೂ ತಾಯಂದಿರ ದಿನಾಚರಣೆಯ ಶುಭಾಶಯ,” ಎಂದು ವಿಶ್ ಈ ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.

ರಸ್ತೆ ಬದಿಯೊಂದರಲ್ಲಿ ಮೈ‌ಕ್ ಹಿಡಿದು ನಿಂತಿರುವ ವಿಶ್ ಸುತ್ತಲೂ ಭಾರೀ ಜನಸಾಗರ ನೆರೆದಿರುವುದನ್ನು ಕಾಣಬಹುದಾಗಿದೆ. ವಿಶ್‌ ಜೊತೆಗೆ ಅಲ್ಲಿದ್ದ ಎಲ್ಲರೂ ಸಹ ಹಾಡಿಗೆ ದನಿಯಾಗಿದ್ದಾರೆ.

https://www.youtube.com/watch?v=byu850MV3AQ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read