ಗೂಗಲ್ ‌ʼಫೈಂಡ್‌ ಮೈ ಡಿವೈಸ್‌ʼ ಆಪ್ ಗೆ ಹೊಸ ಅಪ್ಡೇಟ್‌ ; ಲೊಕೇಶನ್ ಶೇರಿಂಗ್ ಮತ್ತಷ್ಟು ಸುಲಭ !

ಗೂಗಲ್ ತನ್ನ ಫೈಂಡ್ ಮೈ ಡಿವೈಸ್ ಆ್ಯಪ್‌ಗೆ ಹೊಸ ಅಪ್‌ಡೇಟ್ ತರುವ ಮೂಲಕ ಸ್ನೇಹಿತರು ಮತ್ತು ಕುಟುಂಬದವರ ಲೊಕೇಶನ್ ಶೇರಿಂಗ್ ಅನ್ನು ಇನ್ನಷ್ಟು ಸುಲಭಗೊಳಿಸಿದೆ. ಗೂಗಲ್ ಮ್ಯಾಪ್ಸ್‌ನಲ್ಲಿ ಲೊಕೇಶನ್ ಶೇರ್ ಮಾಡಿದರೆ, ಈ ಅಪ್‌ಡೇಟ್‌ನಿಂದ ಎಲ್ಲ ಮಾಹಿತಿಯನ್ನು ಒಂದೇ ಕಡೆ ನೋಡಬಹುದು.

ಈ ಆ್ಯಪ್‌ನಲ್ಲಿ “ಪೀಪಲ್” ಟ್ಯಾಬ್ ಇದ್ದು, ಅಲ್ಲಿ ಲೊಕೇಶನ್ ಶೇರ್ ಮಾಡಿದವರ ರಿಯಲ್ ಟೈಮ್ ಲೊಕೇಶನ್ ನೋಡಬಹುದು. ಅವರ ವಿಳಾಸ, ದೂರ ಮತ್ತು ಕೊನೆಯ ಅಪ್‌ಡೇಟ್ ಸಮಯ ತಿಳಿಯುತ್ತದೆ. ಗೂಗಲ್ ಮ್ಯಾಪ್ಸ್‌ನಲ್ಲೂ ಈ ಫೀಚರ್ ಇದ್ದರೂ, ಈ ಅಪ್‌ಡೇಟ್‌ನಲ್ಲಿ ಎಲ್ಲ ಮಾಹಿತಿಯನ್ನು ಒಂದೇ ಕಡೆ ನೀಡಲಾಗಿದೆ.

ಗೂಗಲ್ ಖಾತೆ ಬದಲಾವಣೆ ಮತ್ತು ಲೊಕೇಶನ್ ಸೆಟ್ಟಿಂಗ್ಸ್ ಬದಲಾವಣೆ ಕೂಡ ಸುಲಭವಾಗಿದೆ. ಕೆಲಸ ಮತ್ತು ವೈಯಕ್ತಿಕ ಜೀವನಕ್ಕೆ ಬೇರೆ ಬೇರೆ ಖಾತೆ ಬಳಸುವವರಿಗೆ ಇದು ಉಪಯುಕ್ತವಾಗಿದೆ. ಆ್ಯಪಲ್‌ನ ಫೈಂಡ್ ಮೈ ಆ್ಯಪ್‌ನಂತೆ ಇದೂ ಕೆಲಸ ಮಾಡುತ್ತದೆ.

ಆಂಡ್ರಾಯ್ಡ್ ಬಳಕೆದಾರರಿಗೆ ಈ ಅಪ್‌ಡೇಟ್ ಲಭ್ಯವಿದೆ. ಸ್ನೇಹಿತರನ್ನು ಭೇಟಿಯಾಗಲು ಅಥವಾ ಕುಟುಂಬ ಸದಸ್ಯರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಈ ಫೀಚರ್ ಉಪಯುಕ್ತವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read