HomeLatest Newsಅಮೆರಿಕದಲ್ಲಿ ಗೂಗಲ್ CEO 'ಸುಂದರ್ ಪಿಚೈ' ಭಾಷಣಕ್ಕೆ ಅಡ್ಡಿ ; ಪ್ಯಾಲೆಸ್ಟೈನ್ ಪರ ಘೋಷಣೆ ಕೂಗಿ...

ಅಮೆರಿಕದಲ್ಲಿ ಗೂಗಲ್ CEO ‘ಸುಂದರ್ ಪಿಚೈ’ ಭಾಷಣಕ್ಕೆ ಅಡ್ಡಿ ; ಪ್ಯಾಲೆಸ್ಟೈನ್ ಪರ ಘೋಷಣೆ ಕೂಗಿ ಹೊರ ನಡೆದ ವಿದ್ಯಾರ್ಥಿಗಳು |VIDEO

ನ್ಯೂಯಾರ್ಕ್: ಗೂಗಲ್ ಸಿಇಒಸುಂದರ್ ಪಿಚೈ ಅವರು ಭಾಷಣ ಮಾಡುತ್ತಿದ್ದ ವೇಳೆ ಅಮೆರಿಕದ Stanford University ವಿದ್ಯಾರ್ಥಿಗಳು ವಾಕ್‌ಔಟ್ ನಡೆಸಿದ ಘಟನೆ ನಡೆದಿದೆ.

ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಭಾನುವಾರ ಪಿಚೈ ಭಾಗವಹಿಸಿ ಮಾತನಾಡಿದರು. ಸ್ಟ್ಯಾನ್‌ಫೋರ್ಡ್ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಚೈ ಭಾಷಣ ಆರಂಭಿಸುತ್ತಿದ್ದಂತೆಯೇ ಸುಮಾರು 200 ವಿದ್ಯಾರ್ಥಿಗಳು ಕಾರ್ಯಕ್ರಮದಿಂದ ಹೊರನಡೆದರು. ಪ್ಯಾಲೆಸ್ಟೈನ್ ಧ್ವಜಗಳು ಹಾಗೂ ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಅವರು, ಪ್ಯಾಲೆಸ್ಟೈನ್‌ಗೆ ಸ್ವಾತಂತ್ರ್ಯ ನೀಡಬೇಕು ಎಂದು ಘೋಷಣೆ ಕೂಗಿದರು.

Students for Justice in Palestine ಹಾಗೂ No Tech for Apartheid ವಿದ್ಯಾರ್ಥಿ ಸಂಘಟನೆಗಳು ಈ ಪ್ರತಿಭಟನೆಗೆ ನೇತೃತ್ವ ನೀಡಿದ್ದವು. ಇದೇ ವೇಳೆ, ಇಸ್ರೇಲ್ ಸರ್ಕಾರದ ಪ್ರಾಜೆಕ್ಟ್ ನಿಂಬಸ್‌ನಲ್ಲಿ ಗೂಗಲ್ ಭಾಗಿಯಾಗಿರುವುದನ್ನು ವಿದ್ಯಾರ್ಥಿಗಳು ವಿರೋಧಿಸಿದರು. ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಸಂಬಂಧಿಸಿದ ಒಪ್ಪಂದಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಈ ತಂತ್ರಜ್ಞಾನವನ್ನು ಸೇನಾ ಕಾರ್ಯಾಚರಣೆಗಳಿಗೆ ಬಳಸುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಆದರೆ, ತಮ್ಮ ಭಾಷಣದಲ್ಲಿ ಸುಂದರ್ ಪಿಚೈ ಈ ವಿವಾದದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ. ಬದಲಾಗಿ, ಚೆನ್ನೈನಿಂದ ಸಿಲಿಕಾನ್ ವ್ಯಾಲಿವರೆಗೆ ತಮ್ಮ ವೈಯಕ್ತಿಕ ಬದುಕಿನ ಪಯಣವನ್ನು ವಿವರಿಸಿದರು. ತಮ್ಮ ತಂದೆ ವರ್ಷಪೂರ್ತಿ ಕಷ್ಟಪಟ್ಟು ತಮಗೆ ವಿಮಾನ ಟಿಕೆಟ್ ಖರೀದಿಸಿ ಕೊಟ್ಟಿದ್ದನ್ನು ಅವರು ನೆನಪಿಸಿಕೊಂಡರು. ತಾವು ಮೊದಲ ಬಾರಿ ಸ್ಟ್ಯಾನ್‌ಫೋರ್ಡ್‌ಗೆ ಬಂದ ಸಂದರ್ಭವನ್ನೂ ಹಂಚಿಕೊಂಡರು. ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸುಂದರ್ ಪಿಚೈ ನಿರಾಕರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular