HomeIndiaಹಳಿತಪ್ಪಿದ ಗೂಡ್ಸ್ ರೈಲಿನ 8 ಬೋಗಿಗಳು

ಹಳಿತಪ್ಪಿದ ಗೂಡ್ಸ್ ರೈಲಿನ 8 ಬೋಗಿಗಳು

ಚೆನ್ನೈ: ಗೂಡ್ಸ್ ರೈಲಿನ 8 ಬೋಗಿಗಳು ಹಳಿತಪ್ಪಿದ ಘಟನೆ ತಮಿಳುನಾಡಿನ ಚಂಗಲ್ಪಟ್ಟು ಬಳಿ ನಡೆದಿದೆ.

ವಿಲ್ಲುಪುರಂನಿಂದ ತೊಂಡೈರ್ ಪೇಟೆ ಗೆ ತೆರಳುತ್ತಿದ್ದ ಗೂಡ್ಸ್ ರೈಲಿನ ಎಂಟು ಬೋಗಿಗಳು ಹಳಿತಪ್ಪಿವೆ. ಪರಿಣಾಮ ಉಳಿದ ರೈಲುಗಳ ಸೇವೆಯಲ್ಲಿ ವ್ಯತ್ಯಾಸವಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

38 ಬೋಗಿಗಳನ್ನು ಹೊಂದಿರುವ ರೈಲಿನಲ್ಲಿ ಕಬ್ಬಿಣದ ಅದಿರು, ಲೋಹ ಮತ್ತು ಕಬ್ಬಿಣದ ರಾಡ್ ಗಳನ್ನು ತುಂಬಿಸಲಾಗಿತ್ತು. 8 ಬೋಗಿಗಳು ಹಳಿತಪ್ಪಿವೆ. ರೈಲ್ವೆ ಹಳಿಗಳ ಮೇಲೆ ಕಬ್ಬಿಣದ ಲೋಹ, ರಾಡ್ ಗಳು ಬಿದ್ದಿದ್ದು, ರೈಲ್ವೆ ಹಳಿಗಳು ಹಾನಿಯಾಗಿವೆ.

ಘಟನಾ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು, ದುರಸ್ಥಿ ಕಾರ್ಯ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular