HomeAutoಟ್ವಿಟರ್ ನಲ್ಲಿ ಇನ್ಮುಂದೆ ಆಡಿಯೊ-ವಿಡಿಯೊ ಕಾಲ್ ಕೂಡ ಮಾಡ್ಬಹುದು : 'WhatsApp' ಗೆ ಶಾಕ್ ನೀಡಿದ...

ಟ್ವಿಟರ್ ನಲ್ಲಿ ಇನ್ಮುಂದೆ ಆಡಿಯೊ-ವಿಡಿಯೊ ಕಾಲ್ ಕೂಡ ಮಾಡ್ಬಹುದು : ‘WhatsApp’ ಗೆ ಶಾಕ್ ನೀಡಿದ ಎಲಾನ್ ಮಸ್ಕ್

ನವದೆಹಲಿ : ‘X’ ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು,  ಶೀಘ್ರ ಶೀಘ್ರವೇ ವಿಡಿಯೊ–ಆಡಿಯೊ ಕರೆ ಸೇವೆ ಆರಂಭಿಸುವುದಾಗಿ ಸಂಸ್ಥೆಯ ಮಾಲೀಕ ಉದ್ಯಮಿ ಎಲಾನ್ ಮಸ್ಕ್ ಘೋಷಣೆ ಮಾಡಿದ್ದಾರೆ.

‘WhatsApp’ ಗೆ ಟಕ್ಕರ್ ನೀಡಲು ಖ್ಯಾತ ಮೈಕ್ರೋ ಬ್ಲಾಗಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶೀಘ್ರದಲ್ಲೇ ಐಒಎಸ್, ಆಂಡ್ರಾಯ್ಡ್, ಮ್ಯಾಕ್ ಮತ್ತು ಪಿಸಿಯಲ್ಲಿ ಬೆಂಬಲಿಸುವ ವೀಡಿಯೊ ಮತ್ತು ಆಡಿಯೊ ಕರೆ ವೈಶಿಷ್ಟ್ಯಗಳನ್ನು ಸೇರಿಸಲಿದೆ ಎಂದು ಎಲೋನ್ ಮಸ್ಕ್ ಗುರುವಾರ ಪ್ರಕಟಿಸಿದ್ದಾರೆ.

ಕರೆಗಳನ್ನು ಮಾಡಲು ಯಾವುದೇ ಫೋನ್ ಸಂಖ್ಯೆಯ ಅಗತ್ಯವಿಲ್ಲ ಎಂದು ಅವರು ಹೇಳಿದರು. “ಎಕ್ಸ್ ಗೆ ಬರುವ ವೀಡಿಯೊ ಮತ್ತು ಆಡಿಯೊ ಕರೆಗಳು – ಐಒಎಸ್, ಆಂಡ್ರಾಯ್ಡ್, ಮ್ಯಾಕ್ ಮತ್ತು ಪಿಸಿಯಲ್ಲಿ ಕಾರ್ಯನಿರ್ವಹಿಸುತ್ತವೆ – ಯಾವುದೇ ಫೋನ್ ಸಂಖ್ಯೆಗಳು ಅಗತ್ಯವಿಲ್ಲ – ಎಕ್ಸ್ ಪರಿಣಾಮಕಾರಿ ಜಾಗತಿಕ ವಿಳಾಸ ಪುಸ್ತಕವಾಗಿದೆ” ಎಂದು ಮಸ್ಕ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ” ಕೆಲವು ದಿನಗಳ  ಹಿಂದೆಯಷ್ಟೇ ಎಲಾನ್ ಮಸ್ಕ್ ಅವರು ಟ್ವಿಟರ್ ಹೆಸರನ್ನು ‘ಎಕ್ಸ್’ ಎಂದು ಮರುನಾಮಕರಣ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular