ನವದೆಹಲಿ: ಪ್ರಮುಖ ಸಾಮಾಜಿಕ ಜಾಲತಾಣ ವಾಟ್ಸಾಪ್ ಸಂದೇಶ ಅನುವಾದದ ಹೊಸ ಫೀಚರ್ ಪರಿಚಯಿಸಿದೆ. ಸಂದೇಶವನ್ನು ನಾವು ಬಯಸುವ ಭಾಷೆಗೆ ಅನುವಾದಿಸುವ ಹೊಸ ಫೀಚರ್ ಪರಿಚಯಿಸಲಾಗಿದೆ. ಯಾರಿಗಾದರೂ ನೀವು ಹಿಂದಿಯಲ್ಲಿ ಅಥವಾ ಇಂಗ್ಲೀಷ್ ನಲ್ಲಿ ಸಂದೇಶ ಕಳುಹಿಸಬೇಕೆಂದರೆ ಮೊದಲು ಅದನ್ನು ಕನ್ನಡದಲ್ಲಿ ಟೈಪ್ ಮಾಡಬೇಕು. ಬಳಿಕ ಸಂದೇಶವನ್ನು ದೀರ್ಘವಾಗಿ ಒತ್ತಿ ಹಿಡಿಯಬೇಕು. ಆಗ ಕಾಣಿಸುವ ಟ್ರಾನ್ಸ್ಲೇಟ್ ಒತ್ತಬೇಕು. ಅಲ್ಲಿ ತೋರಿಸುವ ಭಾಷೆಗಳ ಪಟ್ಟಿಯಲ್ಲಿ ಹಿಂದಿ ಅಥವಾ ಇಂಗ್ಲಿಷ್ ಆಯ್ಕೆ ಮಾಡಿ ಸಂದೇಶವನ್ನು ಕಳುಹಿಸಬಹುದು.
ಇದನ್ನು ಖಾಸಗಿಯಾಗಿ ಅಥವಾ ಗ್ರೂಪ್ ಚಾಟ್ ನಲ್ಲಿಯೂ ಬಳಸಿಕೊಳ್ಳಬಹುದಾಗಿದೆ. ಪ್ರಸ್ತುತ ಆಂಡ್ರಾಯ್ಡ್ ನಲ್ಲಿ ಹಿಂದಿ ಸೇರಿದಂತೆ 7 ಭಾಷೆಗಳಲ್ಲಿ ಅನುವಾದವಿದೆ. ಐಫೋನ್ ನಲ್ಲಿ 19 ಭಾಷೆಗಳಿಗೆ ತರ್ಜುಮೆ ಮಾಡಬಹುದಾಗಿದೆ.