ಕಿರುತೆರೆ ಪ್ರೇಕ್ಷಕರಿಗೆ ಗುಡ್ ನ್ಯೂಸ್ : ಬಿಗ್ ಬಾಸ್-11 ಆರಂಭಕ್ಕೆ ಮುಹೂರ್ತ ಫಿಕ್ಸ್ .!

ಬೆಂಗಳೂರು : ಕಿರುತೆರೆ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಬಿಗ್ ಬಾಸ್-11 ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಹೌದು, ಸೆ.28 ರಿಂದ ಬಿಗ್ ಬಾಸ್-11 ಆರಂಭವಾಗಲಿದೆ.

ಹೌದು, ಈ ಬಾರಿ ಸೆಪ್ಟೆಂಬರ್ 28 ತಿಂಗಳಿನಿಂದ ಬಿಗ್ ಬಾಸ್ ಶೋ ಆರಂಭವಾಗಲಿದ್ದು, ಈಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. ಸಿನಿಮಾ ಹಾಗೂ ಕಿರುತೆರೆ ನಟ-ನಟಿಯರು ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ. ಕಿರುತೆರೆ ಸ್ಟಾರ್ಗಳ ಜತೆಗೆ ಸೋಷಿಯಲ್ ಮೀಡಿಯಾ ಸ್ಟಾರ್ ಗಳು ಕೂಡ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ.

ಈ ಬಾರಿ ಕಿಚ್ಚ ಸುದೀಪ್  ಬಿಗ್ ಬಾಸ್-11 ಗೆ ನಿರೂಪಣೆ ಮಾಡುತ್ತಿರುವುದು ಅನುಮಾನ ಎನ್ನಲಾಗಿದೆ.  ಯಾರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ  ಎಂಬುದನ್ನು ಕಾದು ನೋಡಬೇಕಾಗಿದೆ.

ಈಗಾಗಲೇ ಹಲವು ಸಂಭಾವ್ಯ ಸ್ಪರ್ಧಿಗಳ ಹೆಸರುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಸ್ಯ ನಟ ರಾಘವೇಂದ್ರ, ನಟ ತ್ರಿವಿಕ್ರಮ್, ತುಕಾಲಿ ಸಂತು ಹೆಂಡತಿ ಮಾನಸ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗಿದೆ.ಕಳೆದ ಬಿಗ್ ಬಾಸ್-10 ಕೆಲವು ವಿವಾದಗಳಿಂದ ಭಾರಿ ಸುದ್ದಿಯಾಗಿತ್ತು. ಬಿಗ್ ಬಾಸ್-10 ರಲ್ಲಿ ನಟ ಕಾರ್ತಿಕ್ ಬಿಗ್ ಬಾಸ್ ಟ್ರೋಫಿ ಮುಡಿಗೇರಿಸಿಕೊಂಡಿದ್ದು, ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದರು.

https://twitter.com/i/status/1833498234897240541

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read