HomeKarnatakaಸೇನೆ ಸೇರಬಯಸುವವರಿಗೆ ಗುಡ್‌ ನ್ಯೂಸ್‌ : ʻಅಗ್ನಿಪಥ್‌ʼ ನೇಮಕಾತಿ ನೋಂದಣಿಗೆ ಅವಕಾಶ

ಸೇನೆ ಸೇರಬಯಸುವವರಿಗೆ ಗುಡ್‌ ನ್ಯೂಸ್‌ : ʻಅಗ್ನಿಪಥ್‌ʼ ನೇಮಕಾತಿ ನೋಂದಣಿಗೆ ಅವಕಾಶ

ಬೆಂಗಳೂರು : ಬೆಳಗಾವಿ ಆರ್ಮಿ ರಿಕ್ರೂಟಿಂಗ್ ಕಚೇರಿ ಹಾಗೂ ಬೆಂಗಳೂರು ಹೆಡ್‌ಕ್ವಾರ್ಟರ್ ರಿಕ್ರೂಟಿಂಗ್ ಝೋನ್ ಇವುಗಳ ಸಹಯೋಗದೊಂದಿಗೆ ಆಗ್ನಿಪಥ ನೇಮಕಾತಿಗಾಗಿ ಸಂಬಂಧಿಸಿದಂತೆ ಈಗಾಗಲೇ 2024ರ ಫೆಬ್ರವರಿ 13ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್‌ದಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕೆಂದು ಬೆಳಗಾವಿ ಆರ್ಮಿ ರಿಕ್ರೂಟಿಂಗ್ ಕಚೇರಿಯ ಡೈರೆಕ್ಟರ್ ರಿಕ್ರೂಟಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಗ್ನಿವೀರ ಜನರಲ್ ಡ್ಯೂಟಿ, ಅಗ್ನಿವೀರ ಟೆಕ್ನಿಕಲ್, ಅಗ್ನಿವೀರ ಟ್ರೇಡ್ಸ್ಮೆನ್‌ಗೆ 10ನೇ ತರಗತಿ ಪಾಸಾಗಿರಬೇಕು. ಅಗ್ನಿವೀರ ಟ್ರೇಡ್ಸ್ಮೆನ್‌ಗೆ 8ನೇ ತರಗತಿ ಪಾಸಾಗಿರಬೇಕು. ಅದರಂತೆ ಅಗ್ನಿವೀರ ಆಫೀಸ್ ಅಸಿಸ್ಟಂಟ್/ಸ್ಟೋರ್ ಕೀಪರ್ ಟೆಕ್ನಿಕಲ್ ಕೆಟಗೇರಿಗಳಿಗೆ ನೇಮಕಾತಿ ನಡೆಯಲಿದೆ.

 ಈ ಅಗ್ನಿಪಥ ನೇಮಕಾತಿಯಲ್ಲಿ ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಿಗೆ ಸಂಬAಧಪಟ್ಟ ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಇಂಡಿಯನ್ ಆರ್ಮಿ  joinindianarmy.nic.in  ವೆಬ್‌ಸೈಟ್‌ದಲ್ಲಿ ಆನ್‌ಲೈನ್ ಮೂಲಕ 2024ರ ಮಾರ್ಚ್ 22 ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಅಗ್ನಿಪಥ ನೇಮಕಾತಿಗೆ ಅಗ್ನಿಪಥ್‌ ನೇಮಕಾತಿಗೆ ಬೆಳಗಾವಿ ಸೇನಾ ನೇಮಕಾತಿ ಕಚೇರಿಯಿಂದ ದಿನಾಂಕ: 12-02-2024 ರಂದು ಅಧಿಸೂಚನೆ ಹೊರಡಿಸಿದ್ದು, ಹುದ್ದೆಗಳಿಗೆ ನಿಗದಿಪಡಿಸಿದ ವಯೋಮಿತಿ, ಶಿಕ್ಷಣ, ಅರ್ಹತೆ ಮತ್ತು ಮತ್ತಿತರ ಮಾನದಂಡಗಳನ್ನು ಈ ಅಧಿಸೂಚನೆಯನ್ನು ನೋಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular