1978ನೇ ಇಸವಿಗಿಂತ ಹಿಂದಿನಿಂದ ʻಅರಣ್ಯ ಭೂಮಿ ಸಾಗುವಳಿʼ ಮಾಡುತ್ತಿರುವವರಿಗೆ ಗುಡ್ ನ್ಯೂಸ್ : ಶೀಘ್ರವೇ ʻಹಕ್ಕುಪತ್ರʼ ವಿತರಣೆ

 

ಬೆಳಗಾವಿ : 1978ನೇ ಇಸವಿಗಿಂತ ಹಿಂದಿನಿಂದ ಸಾಗುವಳಿ ಮಾಡುತ್ತಿರುವವರಿಗೆ ಅರ್ಹತೆ ಆಧರಿಸಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವರು. ಅರಣ್ಯ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ನಡೆಸಿ, ಅರಣ್ಯ ಭೂಮಿ ರಕ್ಷಿಸಲಾಗುವುದು. ಹಾಗೂ 1978ನೇ ಇಸವಿಗಿಂತ ಹಿಂದಿನ ಸಾಗುವಳಿ ಮಾಡುತ್ತಿರುವವರಿಗೆ ಅರ್ಹತೆ ಆಧರಿಸಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಹೇಳಿದ್ದಾರೆ.

31 ಜಿಲ್ಲೆಗಳಿಂದ ಬಂದ ಎಲ್ಲಾ ಅರ್ಜಿಗಳನ್ನು ನಾವು ಪರಿಶೀಲಿಸಿದ್ದೇವೆ ಮತ್ತು ಭೂಮಿಯ ಜಂಟಿ ಸಮೀಕ್ಷೆ ಸಹ ಪೂರ್ಣಗೊಂಡಿದೆ ಮತ್ತು ಮುಂದಿನ ಒಂದು ತಿಂಗಳೊಳಗೆ ಅವರಿಗೆ ಹಕ್ಕುಪತ್ರಗಳನ್ನು ನೀಡಲಾಗುವುದು ಎಂದು ಖಂಡ್ರೆ ಹೇಳಿದರು. ಸಚಿವರು ಸದನಕ್ಕೆ ಹೇಳಿದಂತೆ, ಸುಮಾರು 8,000 ಜನರು ಪ್ರಯೋಜನ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read