BIG NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಜಮೀನು ದಾರಿಗಳಿಗೆ ಅವಕಾಶ ಕಲ್ಪಿಸುವ ಹೊಸ ಯೋಜನೆ ಜಾರಿ.!

ಬೆಂಗಳೂರು : ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ರಸ್ತೆ ಸಂಪರ್ಕ ಒದಗಿಸುವುದು ನಮ್ಮ ಗುರಿಯಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರ ವಿನೂತನ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಕುರಿತು ವಿಧಾನಸಭೆಯಲ್ಲಿ ಮಾಹಿತಿ ನೀಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

‘ನಮ್ಮ ಗ್ರಾಮ, ನಮ್ಮ ಹೊಲ’ ಯೋಜನೆ ಸ್ಥಗಿತವಾಗಿರುವುದರಿಂದ ರೈತರು ಹೊಲಕ್ಕೆ ಹೋಗುವ ದಾರಿಗಳಿಗೆ ಅವಕಾಶ ಕಲ್ಪಿಸುವ ನೀತಿಯನ್ನು ಹೊಸ ರೂಪದಲ್ಲಿ ತರುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇನೆ. ಅದು ಈ ಬಜೆಟ್ನಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.’ಪ್ರಗತಿಪಥ’ ಎಂಬ ವಿನೂತನ ಕಾರ್ಯಕ್ರಮದಡಿ ₹5,000 ಕೋಟಿ ಖರ್ಚು ಮಾಡಿ, ಎಲ್ಲ ಶಾಸಕರಿಗೆ ಕನಿಷ್ಠ 15 ಕಿಮೀ ರಸ್ತೆ ಅಭಿವೃದ್ಧಿ ಅವಕಾಶ ಕೊಡಬೇಕು ಸಂಕಲ್ಪ ಇಟ್ಟುಕೊಂಡಿದ್ದೇವೆ. ಇದಕ್ಕೆ ಆರ್ಥಿಕ ವ್ಯವಹಾರಗಳ ಇಲಾಖೆಯಿಂದ ಸಮ್ಮತಿ ಸಿಕ್ಕಿದೆ. ಈ ತಿಂಗಳ ಒಳಗೆ ಇದರ ಎಲ್ಲ ಮಾನದಂಡಗಳನ್ನು ಕಾರ್ಯಕಾರಿ ಎಂಜಿನಿಯರ್ಗೆ ತಲುಪಿಸಿ, ಎಲ್ಲ ಶಾಸಕರ ಆದ್ಯತೆ ಮೇರೆಗೆ ಯೋಜನೆ ಜಾರಿಗೆ ತರುತ್ತೇವೆ.

ಹಾಗೆಯೇ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ನಾಲ್ಕನೆಯ ಹಂತದ ಮಾನದಂಡಗಳನ್ನು ಪ್ರಕಟಿಸಲಾಗಿದ್ದು, ನಮ್ಮ ರಾಜ್ಯದಲ್ಲಿ ದೊಡ್ಡ ಗ್ರಾಮಗಳಿಗೆ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ರಸ್ತೆಗಳು ಮಂಜೂರು ಆಗಿವೆ. ಆದರೆ ಇದರ ಮಾನದಂಡಗಳನ್ನು ಸರಳೀಕರಣ ಮಾಡಬೇಕು ಎಂದು ಕೋರಿ ಕೆಲವು ತಿಂಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಅದು ಸಾಧ್ಯವಿಲ್ಲ ಎಂದು ತಿರಸ್ಕಾರ ಮಾಡಿದ್ದಾರೆ. ಮತ್ತೊಮ್ಮೆ ರಾಜ್ಯದ ಪರವಾಗಿ ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡುತ್ತೇನೆ. ಅವರು ಮಾನದಂಡ ಬದಲಾವಣೆ ಮಾಡದ ಕಾರಣ ‘ಪ್ರಗತಿ ಪಥ’ ಮತ್ತು ‘ಕಲ್ಯಾಣ ಪಥ’ ಯೋಜನೆಗಳನ್ನು ತಂದಿದ್ದೇವೆ. ಇದರೊಂದಿಗೆ ಗ್ರಾಮ ಸಡಕ್ ಯೋಜನೆ ಕೂಡ ಬಂದರೆ ರಾಜ್ಯದ ಗ್ರಾಮಗಳಲ್ಲಿ ಉತ್ತಮ ರಸ್ತೆ ಸಂಪರ್ಕ ಕ್ರಾಂತಿ ನಡೆಯಲಿದೆ ಎಂದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read