HomeLatest NewsGOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಹಗಲಲ್ಲೂ ಸಮರ್ಪಕ ವಿದ್ಯುತ್ ನೀಡುವ...

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಹಗಲಲ್ಲೂ ಸಮರ್ಪಕ ವಿದ್ಯುತ್ ನೀಡುವ ‘ಕುಸುಮ್-ಸಿ’ ಯೋಜನೆಗೆ ಇಂದು ಚಾಲನೆ

ಬೆಂಗಳೂರು : ರಾಜ್ಯದ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಹಗಲಲ್ಲೂ ಸಮರ್ಪಕ ವಿದ್ಯುತ್ ನೀಡುವ ‘ಕುಸುಮ್-ಸಿ’ ಯೋಜನೆಗೆ ಇಂದು ಚಾಲನೆ ಸಿಗಲಿದೆ.

ಕೃಷಿ ಫೀಡರ್ ಗಳ ಸೋಲಾರ್ ವಿದ್ಯುತ್ ಮೂಲಕ ರೈತರ ಕೃಷಿಪಂಪ್ ಸೆಂಟ್ ಗಳಿಗೆ ಹಗಲಲ್ಲೂ ಸಮರ್ಪಕ ವಿದ್ಯುತ್ ನೀಡುವ ‘ಕುಸುಮ್-ಸಿ’ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

ಬುಧವಾರ ಬೆಳಗ್ಗೆ 10:30 ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಗೌರಿಬಿದನೂರಿನ ಮಯ್ಯ ತೊಂಡೇಬಾವಿ ಹೋಬಳಿ ಹನುಮೇನಹಳ್ಳಿಯಲ್ಲಿ ಸ್ಥಾಪಿಸಿರುವ ಸೋಲಾರ್ ಘಟಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ನಂತರ 11 ಕ್ಕೆ ನೇತಾಜಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೃಷಿ ಪಂಪ್ಸೆಟ್ ಗಳಿಗೆ ಕುಸುಮ್ -ಬಿ ಸೋಲಾರ್ ಪವರ್ ಯೋಜನೆ ಜಾರಿಗೊಳಿಸಿದ್ದ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಕುಸುಮ್ -ಸಿ ಸೋಲಾರ್ ಯೋಜನೆ ಜಾರಿಗೆ ಕ್ರಮ ಕೈಗೊಂಡಿದೆ.ಕುಸುಮ್ -ಸಿ ಯೋಜನೆಯಡಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಲು ಮುಂದೆ ಬರುವವರಿಗೆ ಸರ್ಕಾರ ಪ್ರೋತ್ಸಾಹಕರ ಸೌಲಭ್ಯ ನೀಡಲಿದೆ. ಉತ್ಪಾದನೆಯಾದ ಸೋಲಾರ್ ವಿದ್ಯುತ್ ಅನ್ನು ಸಮೀಪದ ಗ್ರಿಡ್ ಗೆ ನೀಡಲು ಉದ್ದೇಶಿಸಲಾಗಿದೆ.
ಕುಸುಮ್ –ಬಿ ಯೋಜನೆಯಡಿ ರೈತರು ಸ್ವಂತ ಜಾಗ ಹೊಂದಿದ್ದರೆ ಪಂಪ್ಸೆಟ್ ಗೆ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಲು ಸರ್ಕಾರವೇ ಸಬ್ಸಿಡಿ ನೀಡುವುದರಿಂದ ಅನೇಕ ರೈತರು ಅಳವಡಿಸಿಕೊಂಡಿದ್ದಾರೆ.

ರೈತರಿಗಾಗಿ ಜಾರಿಯಾಗಿರುವ ಕುಸುಮ್ ಸಿ ಯೋಜನೆಯು ಹಲವು ಅನುಕೂಲ ಕೊಡಲಿದೆ. ತಮ್ಮ ಕೃಷಿ ಪಂಪ್ಸೆಟ್ ಬಳಿಯೇ ರೈತರು ಸೋಲಾರ್ ಘಟಕಗಳನ್ನ ಸ್ಥಾಪಿಸಿಕೊಂಡು, ಹಗಲಲ್ಲೂ ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕ ಕೊಟ್ಟುಕೊಳ್ಳಬಹುದು.ಈ ಮೂಲಕ ವಿದ್ಯುತ್ ಗ್ರಿಡ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಇಂಧನ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular