HomeLatest Newsಹೊಸಕೋಟೆ ಜನತೆಗೆ ಗುಡ್ ನ್ಯೂಸ್: ಕೆಆರ್ ಪುರಂನಿಂದ ಮೆಟ್ರೋ ರೈಲಿಗೆ ಸರ್ಕಾರ ಗ್ರೀನ್ ಸಿಗ್ನಲ್

ಹೊಸಕೋಟೆ ಜನತೆಗೆ ಗುಡ್ ನ್ಯೂಸ್: ಕೆಆರ್ ಪುರಂನಿಂದ ಮೆಟ್ರೋ ರೈಲಿಗೆ ಸರ್ಕಾರ ಗ್ರೀನ್ ಸಿಗ್ನಲ್

ಹೊಸಕೋಟೆ: ಹೊಸಕೋಟೆ ಜನರ ಕನಸಾದ ಮೆಟ್ರೋ ಯೋಜನೆ ನನಸು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಕೆಆರ್ ಪುರಂ ನಿಂದ ಹೊಸಕೋಟೆಗೆ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿದ್ದು, ದೆಹಲಿ ಮೂಲದ ಸಂಸ್ಥೆಯೊಂದಕ್ಕೆ ಅಧ್ಯಯನ ಯೋಜನೆಗೆ ನಿರ್ದೇಶನ ನೀಡಲಾಗಿದೆ.

ಹೊಸಕೋಟೆ ಕ್ಷೇತ್ರದ ಜನರಿಗೆ ಚುನಾವಣೆ ವೇಳೆ ಮೆಟ್ರೋ ಯೋಜನೆ ತರುವ ಆಶ್ವಾಸನೆ ನೀಡಿದ್ದ ಶಾಸಕ ಭರತ್ ಶರತ್ ಬಚ್ಚೇಗೌಡ ಯಶಸ್ವಿಯಾಗಿದ್ದಾರೆ. ಕೆಆರ್ ಪುರಂ ನಿಂದ ಹೊಸಕೋಟೆವರೆಗೆ 16.3 ಕಿಲೋ ಮೀಟರ್ ಉದ್ದ 11 ನಿಲ್ದಾಣಗಳ ಮೆಟ್ರೋವನ್ನು ಹೊಸಕೋಟೆವರೆಗೂ ವಿಸ್ತರಣೆ ಮಾಡಲು ಬಿಎಂಆರ್‌ಸಿಎಲ್ ಅಧ್ಯಯನ ಯೋಜನೆ ಆರಂಭಿಸಿದೆ. ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡು ಬೆಳೆಯುತ್ತಿರುವ ಹೊಸಕೋಟೆಯಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿನಿತ್ಯ ಹೊಸಕೋಟೆ ಮಾರ್ಗದಲ್ಲಿ ಸಾವಿರಾರು ಪ್ರಯಾಣಿಕರು ಬಸ್ ಸೇರಿದಂತೆ ಇತರೆ ವಾಹನಗಳಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಜನರಿಗೆ ಅನುಕೂಲವಾಗುವಂತೆ ಮೆಟ್ರೋ ರೈಲನ್ನು ಹೊಸಕೋಟೆವರೆಗೂ ತರಲಾಗುವುದು ಎಂದು ಶರತ್ ಬಚ್ಚೇಗೌಡ ಆಶ್ವಾಸನೆ ನೀಡಿದ್ದರು. ಅದು ಕಾರ್ಯರೂಪಕ್ಕೆ ಬರಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular