ಹಬ್ಬಕ್ಕೆ ಸಿಹಿ ಸುದ್ದಿ: 2.2 ಲಕ್ಷ ಉದ್ಯೋಗ ಸೃಷ್ಟಿ: ಇ- ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ಘೋಷಣೆ

2.2 ಲಕ್ಷ ತಾತ್ಕಾಲಿಕ ಉದ್ಯೋಗ ಸೃಷ್ಟಿಸುವುದಾಗಿ ಇ- ಕಾಮರ್ಸ್ ಕ್ಷೇತ್ರದ ದೈತ್ಯ ಕಂಪನಿ ಫ್ಲಿಪ್ಕಾರ್ಟ್ ಘೋಷಿಸಿದೆ.

ಸಾಲು ಸಾಲು ಹಬ್ಬಗಳ ಹೊತ್ತಿನಲ್ಲಿ 28 ರಾಜ್ಯಗಳಲ್ಲಿ 2.2 ಲಕ್ಷಕ್ಕೂ ಹೆಚ್ಚಿನ ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಟಿ ಮಾಡಲಾಗುವುದು. ಸರಕು ಸಾಗಣೆ, ಪೂರೈಕೆ ವ್ಯವಸ್ಥೆಯಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸುವ ಕಾರ್ಯಗಳಿಗೆ 2.2 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಫ್ಲಿಪ್ಕಾರ್ಟ್ ಹೇಳಿದೆ.

ಹಬ್ಬಗಳ ಸಂದರ್ಭದಲ್ಲಿ ಕಂಪನಿಯು ಸರಕು ಸಾಗಾಣಿಕೆ ಬೇಡಿಕೆ ಪೂರೈಸಲು ಹೊಸದಾಗಿ 650 ಡೆಲಿವರಿ ಕೇಂದ್ರಗಳನ್ನು ಆರಂಭಿಸಲಿದೆ. ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಈ ಡೆಲಿವರಿ ಕೇಂದ್ರಗಳು ಇರಲಿವೆ.

ಮಹಿಳೆಯರ ನೇಮಕಾತಿಯಲ್ಲಿ ಶೇಕಡ 10 ರಷ್ಟು ಹೆಚ್ಚಳವಾಗಿದ್ದು, ವಿಕಲಚೇತನ ವ್ಯಕ್ತಿಗಳಿಗೆ ಹೆಚ್ಚಿನ ಅವಕಾಶ ನೀಡಲು ಗಮನಹರಿಸಲಾಗಿದೆ ಎಂದು ಹೇಳಲಾಗಿದೆ.

ತಾತ್ಕಾಲಿಕ ಅವಧಿಗೆ 1.5 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವುದಾಗಿ ಅಮೆಜಾನ್ ಇಂಡಿಯಾ ಕಂಪನಿ ಹೇಳಿದ್ದು, ಇದೀಗ ಫ್ಲಿಪ್ಕಾರ್ಟ್ 2.2 ಲಕ್ಷಕ್ಕೂ ಹೆಚ್ಚಿನ ತಾತ್ಕಾಲಿಕ ಉದ್ಯೋಗ ಸೃಷ್ಟಿಸುವುದಾಗಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read