HomeAgricultureರಾಜ್ಯದ ರೈತರಿಗೆ ಗುಡ್ ನ್ಯೂಸ್ : 'ಕೃಷಿ ಸಿಂಚಾಯಿ' ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ‘ಕೃಷಿ ಸಿಂಚಾಯಿ’ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಪ್ರಸಕ್ತ (2024-25) ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಕಾರ್ಯಕ್ರಮದಡಿ ಪ.ಜಾತಿ/ ಪ.ಪಂಗಡ ವರ್ಗದ ರೈತರಿಗೆ ಶೇ.90 ರಷ್ಟು ಸಹಾಯಧನದ ಇತರೆ ವರ್ಗದ ರೈತರಿಗೆ ಶೇ.55 ಸಹಾಯಧನ ಸೌಲಭ್ಯವಿದೆ.

ತೋಟಗಾರಿಕೆಯಲ್ಲಿ ಯಾಂತ್ರೀಕರಣರಡಿ ಕಳೆ ಕೊಚ್ಚುವ ಯಂತ್ರ, ಮರ ಕತ್ತರಿಸುವ ಯಂತ್ರ, ತಳ್ಳುವ ಗಾಡಿ, ಅಲ್ಯೂಮಿನಿಯಂ ಏಣಿ, ಅಡಿಕೆ ದೋಟಿ, ಪವರ್ ವೀಡರ್, ಕಾಳುಮೆಣಸು ಬಿಡಿಸುವ ಯಂತ್ರ, ಅಡಿಕೆ ಬಿಡಿಸುವ ಯಂತ್ರಗಳಿಗೆ ಪ.ಜಾತಿ/ ಪ.ಪಂಗಡ ವರ್ಗ, ಮಹಿಳೆಯರಿಗೆ ರೈತರಿಗೆ ಶೇ.50 ರಷ್ಟು ಸಹಾಯಧನ ಮತ್ತು ಇತರೆ ವರ್ಗದ ರೈತರಿಗೆ ಶೇ.40 ರಷ್ಟು ಸಹಾಯಧನ ನೀಡಲಾಗುವುದು.

ರಾಷ್ಟ್ರೀಯ ಎಣ್ಣೆಕಾಳು ಮತ್ತು ಎಣ್ಣೆ ತಾಳೆ ಅಬಿಯಾನ ಯೋಜನೆ ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಸಹಾಯಧನ ನೀಡಲಾಗುವುದು. ಬಳಗುಂದ ಮತ್ತು ಕೂಡಿಗೆ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ ಗಿಡಗಳು ಲಭ್ಯವಿರುತ್ತದೆ (ಪ್ರತಿ ಗಿಡಕ್ಕೆ ರೂ.25/-). ಹೆಚ್ಚಿನ ವಿವರಗಳಿಗೆ ಆಯಾಯ ಹೋಬಳಿಯ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular