HomeKarnatakaರಾಜ್ಯದ ಬ್ರಾಹ್ಮಣ ಸಮುದಾಯಕ್ಕೆ ಗುಡ್ ನ್ಯೂಸ್ ; ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆಯಡಿ ಅರ್ಜಿ...

ರಾಜ್ಯದ ಬ್ರಾಹ್ಮಣ ಸಮುದಾಯಕ್ಕೆ ಗುಡ್ ನ್ಯೂಸ್ ; ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆಯಡಿ ಅರ್ಜಿ ಆಹ್ವಾನ

ಶಿವಮೊಗ್ಗ : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ 2026-27ನೇ ಸಾಲಿನ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ನೇರವಾಗಿ ಸಾಲ ಮತ್ತು ಸಹಾಯಧನ ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹಸು ಸಾಕಾಣಿಕೆ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ, ಟ್ಯಾಕ್ಸಿ ಮುಂತಾದ ವ್ಯವಹಾರ ವಹಿವಾಟುಗಳನ್ನು ಪ್ರಾರಂಭಿಸಲು ಕನಿಷ್ಠ ರೂ 1.00 ಲಕ್ಷದಿಂದ ಗರಿಷ್ಠ ರೂ.2.00 ಲಕ್ಷಗಳವರೆಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ. ಈ ಪೈಕಿ ಶೇ. 20ರಷ್ಟು ಸಹಾಯಧನ ಸಿಗಲಿದ್ದು, ಉಳಿಕೆ ಮೊತ್ತ ರೂ.80,000/- ವರೆಗೆ ಶೇ. 4ರಷ್ಟು ವಾರ್ಷಿಕ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯಲಿದೆ.

ಅಭ್ಯರ್ಥಿಗಳು ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ವರ್ಗದ ಪ್ರಮಾಣ ಪತ್ರವನ್ನು ಹೊಂದಿರಬೇಕು.ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.18 ರಿಂದ 65 ವರ್ಷದೊಳಗಿರಬೇಕು.ಮಹಿಳೆಯರಿಗೆ ಶೇ. 33 ಹಾಗೂ ದಿವ್ಯಾಂಗದವರಿಗೆ ಶೇ. 5 ರಷ್ಟು ಮೀಸಲಾತಿ ಇರಲಿದಗದು, ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಸೀಡ್ ಆಗಿರಬೇಕು.ಅರ್ಹ ಆಸಕ್ತರು ದಿ: 31-08-2026ರ ಸಂಜೆ 5:30 ರ ಒಳಗಾಗಿ ಮಂಡಳಿಯ ಅಧಿಕೃತ ವೆಬ್‌ಸೈಟ್ www.ksbdb.karnataka.gov.in​ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಸಹಾಯವಾಣಿ (Helpline): 8029605888, 8762249230, 08182 255294 ಹಾಗೂ ಮಂಡಳಿಯ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಂ ಪುಟಗಳನ್ನು ವೀಕ್ಷಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೃಷಿ ಡಿಪ್ಲೊಮಾ ಕೋರ್ಸ್ : ಅರ್ಜಿ ಆಹ್ವಾನ

ಶಿವಮೊಗ್ಗ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಬ್ರಹ್ಮಾವರ ಕೃಷಿ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ 2 ವರ್ಷಗಳ ಡಿಪ್ಲೊಮಾ ಕೃಷಿ ಕೋರ್ಸ್ ನಲ್ಲಿ ಖಾಲಿ ಉಳಿದಿರುವ 31 ಸೀಟುಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಡಿಪ್ಲೊಮಾ (ಕೃಷಿ) ಯನ್ನು ಕನ್ನಡ ಮಾಧ್ಯಮದಲ್ಲಿ ಸೆಮಿಸ್ಟರ್ (4 ಸೆಮಿಸ್ಟರ್) ಪದ್ಧತಿಯಲ್ಲಿ ಬೋಧಿಸಲಾಗುವುದು.

ಪ್ರವೇಶ ಅರ್ಹತೆ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ಡಿಪ್ಲೊಮಾ (ಕೃಷಿ) ಕೋರ್ಸ್ ಗೆ ಪ್ರವೇಶ ಕೋರುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಪಠ್ಯವನ್ನು ಭಾಷೆಯಾಗಿ ಅಭ್ಯಸಿಸಿ ಕನಿಷ್ಟ ಶೇ. 45 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. (ಪ.ಜಾ./ಪ.ಪಂ./ಪ್ರವರ್ಗ-1ರವರುಗಳಿಗೆ ಕನಿಷ್ಠ ಶೇ. 40 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು).ದಿನಾಂಕ: 06-08-2026 ರಂದು ಅಭ್ಯರ್ಥಿಗಳ ವಯಸ್ಸು 19 ವರ್ಷಗಳನ್ನು ಮೀರಿರಬಾರದು. ರೈತರ ಹಾಗೂ ಕೃಷಿಕಾರ್ಮಿಕರ ಮಕ್ಕಳಿಗೆ ಶೇ. 50 ರಷ್ಟು ಸೀಟುಗಳನ್ನು ಡಿಪ್ಲೊಮಾ (ಕೃಷಿ) ಪ್ರವೇಶಾತಿಗೆ ಮೀಸಲಿಡಲಾಗಿದೆ. ಅಧಿಸೂಚನೆ, ಅರ್ಜಿ ಹಾಗೂ ಮಾಹಿತಿ ಪುಸ್ತಕವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ವೆಬ್ಸೈಟ್: www.uahs.edu.in ನಲ್ಲಿ ದಿನಾಂಕ: 06-08-2026 ರೊಳಗೆ ಡೌನ್ ಲೋಡ್ ಮಾಡಿಕೊಂಡು ಭರ್ತಿಮಾಡಿದ ಅರ್ಜಿಗಳನ್ನು ಮತ್ತು ಅರ್ಜಿಯ ನಿಗದಿತ ಶುಲ್ಕವನ್ನು ಡಿ.ಡಿ. ರೂಪದಲ್ಲಿ ಲಗತ್ತಿಸಿ, ದಿನಾಂಕ: 06-08-2026 ರೊಳಗೆ ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಇರುವಕ್ಕಿ ಆವರಣ- 577 412 ಇಲ್ಲಿಗೆ ಕಳುಹಿಸಿಕೊಡಬೇಕು. ದಿನಾಂಕ: 06-08-2026 ರ ನಂತರ ಡಿ.ಡಿ. ಯನ್ನು ಪಡೆದು ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅರ್ಜಿ ಶುಲ್ಕ: ಸಾಮಾನ್ಯ ವರ್ಗದವರಿಗೆ ರೂ. 500/-, ಪ.ಜಾ./ಪ.ಪಂ./ಪ್ರವರ್ಗ-1ರವರಿಗೆ ರೂ. 250/- ಆಗಿದ್ದು, ರಾಷ್ಟ್ರೀಕೃತ ಬ್ಯಾಂಕ್ಗಳ (Nationalized Bank) ಡಿ.ಡಿ. ಯನ್ನು Comptroller, KSNUAHS, Shivamogga –577 412 ಇವರ ಹೆಸರಿನಲ್ಲಿ ಪಡೆದು ಎಲ್ಲಾ ಅಗತ್ಯ ಅಡಕಗಳೊಂದಿಗೆ ಭರ್ತಿಮಾಡಿದ ಅರ್ಜಿಗಳನ್ನು ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಇರುವಕ್ಕಿ ಆವರಣ- 577 412 ಇಲ್ಲಿಗೆ ದಿನಾಂಕ: 06-08-2026 ರೊಳಗೆ ತಲುಪುವಂತೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದು. ದಿನಾಂಕ: 06-08-2026 ರ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಪ್ರವೇಶ ಮತ್ತು ಆಯ್ಕೆ ವಿಧಾನ: ಸರ್ಕಾರದ ಆದೇಶಗಳ ಅನ್ವಯ ಸೀಟುಗಳನ್ನು ಭರ್ತಿ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ದತಿಯನ್ನು ಅಳವಡಿಸಿ, ಪ್ರವೇಶಕ್ಕೆ ಆಯ್ಕೆ ಮಾಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪತ್ರ ಹಾಗೂ ವೆಬ್‌ಸೈಟ್ ಮುಖಾಂತರ ತಿಳಿಸಲಾಗುವುದು ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular