ಹೆಚ್.ಎ.ಎಲ್.(ಹಿಂದೂಸ್ತಾನ್ ಎರೋನಾಟಿಕಲ್ ಲಿಮಿಟೆಡ್) ನಲ್ಲಿ ಫೀಟ್ಟರ್, ಮೆಕಾನಿಕ್, ಟರ್ನರ್, ಎಲೆಕ್ಟ್ರೀಷಿಯನ್, ವೆಲ್ಡರ್, ಫೌಂಡ್ರಿ ಮೆನ್, ಟೂಲ್ ಅಂಡ್ ಡೈ ಮೇಕರ್, ಸಿಎನ್‍ಜಿ ಪ್ರೋಗ್ರಾಮರ್ ಕಮ್ ಆಪರೇಟರ್, ರೆಫ್ರಿಜಿರೇಟರ್ ಅಂಡ್ ಏರ್ ಕನ್‍ಡಿಷನರ್ ಮೆಕಾನಿಕ್, ಟ್ರೇಡ್‍ಗಳ ಅಪ್ರೆಂಟಿಸ್ ತರಬೇತಿ ಅರ್ಜಿ ಆಹ್ವಾನಿಸಲಾಗಿದೆ.
ಅಪ್ರೆಂಟಿಸ್ ತರಬೇತಿ ಒಂದು ವರ್ಷದ ಅವಧಿಯಾಗಿದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿ ಸಂಬಂಧಪಟ್ಟ ಟ್ರೇಡ್‍ಗಳಲ್ಲಿ ಐ.ಟಿ.ಐ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ಸ್ವ ದೃಢೀಕೃತ ರಿಸಲ್ಟ್ ಶಿಟ್, ಆಧಾರ್ ಮತ್ತು ಪಾನ್ ಕಾರ್ಡ್, ಜಾತಿ, ಅಂಗವಿಕಲರ, ಆರ್ಮಡ್ ಪರ್ಸನಲ್ ಪ್ರಮಾಣ ಪತ್ರಗಳು, ಎನ್.ಸಿ.ವಿ.ಟಿ. ಎಮ್.ಐ.ಎಸ್. ಪೋರ್ಟಲ್ ನೊಂದಣಿ ಪ್ರಮಾಣ ಪತ್ರ, 4 ಪೋಟೋ ಗಳೊಂದಿಗೆ ವೆಬ್ ಸೈಟ್ https://apprenticeshipindia.gov.in ಅಥವಾ www.hal-india.com/career ನಲ್ಲಿ ಅರ್ಜಿ ಸಲ್ಲಿಸಬಹುದು.
ಸೆಪ್ಟೆಂಬರ್ 30 ಕಡೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9945587060, 7022459064, ಅಥವಾ 7019755147 ಸಂಪರ್ಕಿಸುವಂತೆ ಚಿತ್ರದುರ್ಗ ಜಿಲ್ಲಾ ಉದ್ಯೊಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.