HomeKarnatakaರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾ ಪಟುಗಳಿಗೆ ಗುಡ್‌ ನ್ಯೂಸ್‌ :  ಪ್ರೋತ್ಸಹ ಸಹಾಯಧನಕ್ಕೆ...

ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾ ಪಟುಗಳಿಗೆ ಗುಡ್‌ ನ್ಯೂಸ್‌ :  ಪ್ರೋತ್ಸಹ ಸಹಾಯಧನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು : 2023-24 ನೇ ಸಾಲಿನಲ್ಲಿ ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾ ಪಟುಗಳಿಗೆ ಪ್ರೋತ್ಸಹ ಸಹಾಯ ಧನ ನೀಡುವ ಸಂಬಂಧ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪ್ರತಿ ವರ್ಷ ನಡೆಸುವ ರಾಜ್ಯಮಟ್ಟದ ಶಾಲಾ ಕ್ರೀಡಾಕೂಟಗಳು ಮತ್ತು ರಾಜ್ಯಮಟ್ಟದ ವಿಶೇಷ ಚೇತನರ ಆಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಿಕ್ಷಕರ ಕಲ್ಯಾಣ ನಿಧಿಯಿಂದ ನಗದು ಬಹುಮಾನವನ್ನು ನೀಡಲಾಗುತ್ತಿದೆ.

ಅದರಂತೆ 2023-24 ನೇ ಸಾಲಿನ ರಾಜ್ಯಮಟ್ಟದ ಶಾಲಾ ಕ್ರೀಡಾಕೂಟಗಳಲ್ಲಿ ಮತ್ತು ರಾಜ್ಯಮಟ್ಟದ ವಿಶೇಷ ಚೇತನರ ಅಥ್ಲೆಟಿಕ್ಸ್‌ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಬಹುಮಾನವನ್ನು ನೀಡುವ ಸಂಬಂಧ ರಾಜ್ಯದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಬಂಧಿಸಿದಂತೆ ನಿಗದಿತ ಅರ್ಜಿ ನಮೂನೆಗಳನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಿ ಕಳುಹಿಸುತ್ತಾ, ಅರ್ಜಿಗಳನ್ನು ಸಲ್ಲಿಸಲು ದಿನಾಂಕ: 28.02.2024 ಕಡೆಯ ದಿನಾಂಕವಾಗಿರುತ್ತದೆ. ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರು ಸುತ್ತೋಲೆಯೊಂದಿಗೆ ಲಗತ್ತಿಸಿರುವ ಅರ್ಜಿಗಳನ್ನು ಜಿಲ್ಲೆಯ ಎಲ್ಲಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಕಳುಹಿಸುವುದು.

ವಿಜೇತ ಕ್ರೀಡಾಪಟುಗಳ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ಸ್ವೀಕರಿಸಿ ಒಂದು ಪ್ರತಿಯನ್ನು ಜಿಲ್ಲಾ ಕಛೇರಿಗಳಲ್ಲಿ ಇರಿಸಿ ಇನ್ನೊಂದು ಪ್ರತಿಯನ್ನು ಈ ಕಛೇರಿಗೆ ದೃಢೀಕರಣದೊಂದಿಗೆ ಕಳುಹಿಸುವುದು.

ನಗದು ಬಹುಮಾನದ ಮೊತ್ತವನ್ನು ನೆಫ್ಟ್/ಆ‌ರ್.ಟಿ.ಜಿ.ಎಸ್ ( NEFT/RTGS ) ಮೂಲಕ ಜಿಲ್ಲಾ ಉಪನಿರ್ದೇಶಕರು (ಆಡಳಿತ)/ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳ ಹೆಸರಿನಲ್ಲಿರುವ ಜಿಲ್ಲಾ ವಿದ್ಯಾರ್ಥಿ ಕ್ರೀಡಾ ನಿಧಿ ಖಾತೆಗೆ ವರ್ಗಾಯಿಸಲಾಗುತ್ತದೆ. ಸದರಿ ಮೊತ್ತವನ್ನು ಕ್ರೀಡಾಪಟುಗಳ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ನೆಫ್ಟ್ (NEFT) ಮೂಲಕ ವರ್ಗಾಯಿಸುವುದು ಹಾಗೂ ನಿಯಾಮಾನುಸಾರ ದಾಖಲೆಗಳನ್ನು ನಿರ್ವಹಿಸಿ ಜಿಲ್ಲಾ ಕಛೇರಿಯಲ್ಲಿ ಇರಿಸುವುದು.

ರಾಜ್ಯಮಟ್ಟದ ಗುಂಪು ಮತ್ತು ವೈಯಕ್ತಿಕ ಪಂದ್ಯಾವಳಿ/ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ /ದ್ವಿತೀಯ /ತೃತೀಯ ಸ್ಥಾನವನ್ನು ಪಡೆದ ಕ್ರೀಡಾಪಟುಗಳ ಹೆಸರು, ಶಾಲಾ ವಿಳಾಸ ಮತ್ತು ಸ್ಪರ್ಧೆಗಳಲ್ಲಿ ಪಡೆದಿರುವ ಸ್ಥಾನ ಇತ್ಯಾದಿ ವಿವರಗಳನ್ನೊಳಗೊಂಡ ಕ್ರೋಢೀಕೃತ ಪಟ್ಟಿಗಳನ್ನು ಕೆಳಗಿನ ನಮೂನೆಯಂತೆ ಸಿದ್ದಪಡಿಸಿ ಅರ್ಜಿಗಳೊಂದಿಗೆ ಕಳುಹಿಸಿಕೊಡಲು ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular