ಬೆಂಗಳೂರು : ಪರಿಶಿಷ್ಟ ಜಾತಿ ಸಮೀಕ್ಷೆಯ ಗಣತಿದಾರರಿಗೆ ಗುಡ್ ನ್ಯೂಸ್ ಎಂಬಂತೆ ರಾಜ್ಯ ಸರ್ಕಾರ ಗೌರವಧನ ಬಿಡುಗಡೆ ಮಾಡಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಮಧಂತರ ವರದಿಯಲ್ಲಿನ ಶಿಫಾರಸ್ಸಿನಂತೆ ದಿನಾಂಕ:05-05-2025 ರಿಂದ ದಿನಾಂಕ:06-07-2025 ರವರೆಗೆ ಅಗತ್ಯ ದತ್ತಾಂಶಗಳ ಸಂಗ್ರಹಣೆಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ರಲ್ಲಿ ಗಣತಿದಾರರಾಗಿ ರಾಜ್ಯಾದ್ಯಂತ ಸಮೀಕ್ಷಾ ಕಾರ್ಯನಿರ್ವಹಿಸಿದ ಪ್ರತಿ ಸಮೀಕ್ಷಾದಾರರಿಗೆ Flat ದರದಲ್ಲಿ ಬಾಕಿ ಇರುವ ಮೊತ್ತ ತಲಾ ರೂ.2000/- ಗಳಂತೆ ಒಟ್ಟು ರೂ.11,52,00,000/- ಗಳ ಸಂಭಾವನೆಯನ್ನು ಹಾಗೂ ಸಮೀಕ್ಷೆಗೊಳಪಡಿಸಿದ ಪ್ರತಿ ಪರಿಶಿಷ್ಟ ಜಾತಿ ಮನೆಗೆ ರೂ.100/- ರಂತೆ ಒಟ್ಟು ರೂ.25,08,16,700/- ಗಳು ಸೇರಿ ಒಟ್ಟಾರೇ ರೂ.36,60,16,700/- (ಮೂವತ್ತಾರು ಕೋಟಿ ಅರವತ್ತು ಲಕ್ಷ ಹದಿನಾರು ಸಾವಿರ ಏಳುನೂರು ರೂಪಾಯಿ ಮಾತ್ರ) ಗಳನ್ನು ಅನುಬಂಧ-1 ರಲ್ಲಿ ಲಗತ್ತಿಸಿರುವ ಜಿಲ್ಲಾಧಿಕಾರಿಗಳ ಸಿ.ಓ ಕೋಡ್ಗಳಿಗೆ ಬಿಡುಗಡೆ ಮಾಡಿ ಆದೇಶಿಸಿದೆ.
ಈ ಅನುದಾನವನ್ನು 2025-26 ನೇ ಸಾಲಿನ ಪರಿಶಿಷ್ಟ ಜಾತಿಯವರ ವಿವಿಧ ಅಭಿವೃದ್ಧಿ ಯೋಜನೆ ರಾಜಸ್ವ ಲೆಕ್ಕ ಶೀರ್ಷಿಕೆ:2225-01-796-0-02 (059) ರಡಿ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗದ ನಿರ್ವಹಣಾ ವೆಚ್ಚ ಮತ್ತು ಒಳ ಮೀಸಲಾತಿ ಸಮೀಕ್ಷಾ ವೆಚ್ಚಕ್ಕೆ ಬಿಡುಗಡೆ ಮಾಡಲಾಗಿರುವ ರೂ.54.00 ಕೋಟಿ ಅನುದಾನದಲ್ಲಿ ಭರಿಸುವುದು ಎಂದು ತಿಳಿಸಿದೆ.


