ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC) 644 ಹೊಸ ಬಸ್ ಗಳನ್ನು ಪರಿಚಯಿಸಲು ಮುಂದಾಗಿದೆ. ಸೀಮಿತ ಸಾರಿಗೆ ವ್ಯವಸ್ಥೆ ಇರುವ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿ ಸಾರಿಗೆ ಸೇವೆಯನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದೆ.
ಕೆಎಸ್ಆರ್ಟಿಸಿಗೆ ನಿರಂತರವಾಗಿ ಹೊಸ ಬಸ್ ಗಳ ಸೇರ್ಪಡೆಯಾಗುತ್ತಿದ್ದು, 500 ಸಾಮಾನ್ಯ ಬಸ್ ಗಳು, 144 ಎರಡು ಬಾಗಿಲು ಇರುವ ಮೊಫ್ಯುಸಿಲ್ ಬಸ್ ಗಳನ್ನು ಖರೀದಿಸಲು ಮುಂದಾಗಿದೆ. ಇವುಗಳನ್ನು ಗ್ರಾಮೀಣ ಮಾರ್ಗಗಳಿಗೆ ಮೀಸಲಾಗಿಡಲಾಗಿದೆ.
ಬೇಡಿಕೆ ಹೆಚ್ಚಾಗಿರುವ ಗ್ರಾಮೀಣ ಪ್ರದೇಶಗಳಿಗೆ ಬಸ್ ಗಳನ್ನು ನಿಯೋಜಿಸಲಾಗುವುದು. ಶಕ್ತಿ ಯೋಜನೆ ಜಾರಿಯಾದ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದರಿಂದ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸಂಪರ್ಕ ಹೆಚ್ಚಿಸಲು ಕೆಎಸ್ಆರ್ಟಿಸಿ ಕ್ರಮ ಕೈಗೊಂಡಿದ್ದು, 644 ಹೊಸ ಬಸ್ ಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರವೇ ಬಸ್ ಗಳು ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿವೆ.

