ಬೆಂಗಳೂರು: ಪ್ರಯಾಣಿಕರ ಬೇಡಿಕೆಯಂತೆ ಬೆಂಗಳೂರಿನ ಯಶವಂತಪುರ -ವಿಜಯಪುರ ನಡುವೆ ಎಕ್ಸ್ ಪ್ರೆಸ್ ವಿಶೇಷ ವಾರಕ್ಕೊಮ್ಮೆ ಬದಲಾಗಿ ಜೂನ್ 1ರಿಂದ ವಾರಕ್ಕೆ ಎರಡು ಬಾರಿ ಸಂಚರಿಸಲಿದೆ.
ಯಶವಂತಪುರ -ವಿಜಯಪುರ ನಡುವೆ ವಿಶ್ವೇಶ ರೈಲು ಜೂನ್ 29 ರವರೆಗೆ ಪ್ರತಿ ಶನಿವಾರ ಮತ್ತು ಸೋಮವಾರ ಯಶವಂತಪುರದಿಂದ ಸಂಚರಿಸಲಿದೆ. ಜೂನ್ 30ರವರೆಗೆ ಪ್ರತಿ ಭಾನುವಾರ ಮತ್ತು ಮಂಗಳವಾರ ವಿಜಯಪುರದಿಂದ ಬೆಂಗಳೂರಿಗೆ ತೆರಳಲಿದೆ.
ಬೆಂಗಳೂರಿನಿಂದ ಹೊರಡುವ ರೈಲು ಸಂಜೆ 4:15ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 5:15ಕ್ಕೆ ವಿಜಯಪುರ ತಲುಪಲಿದೆ. ಅದೇ ರೀತಿ ಸಂಜೆ ಐದು ಗಂಟೆಗೆ ವಿಜಯಪುರದಿಂದ ಹೊರಟು ಮರುದಿನ ಬೆಳಿಗ್ಗೆ 4:10ಕ್ಕೆ ಯಶವಂತಪುರ ತಲುಪಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

