HomeKarnataka'ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಗುಡ್ ನ್ಯೂಸ್ : ಶೀಘ್ರದಲ್ಲೇ ಬರಲಿದೆ ಹೊಸ 'QR ಕೋಡ್' ಆ್ಯಪ್

‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಶೀಘ್ರದಲ್ಲೇ ಬರಲಿದೆ ಹೊಸ ‘QR ಕೋಡ್’ ಆ್ಯಪ್

ಬೆಂಗಳೂರು : ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ ಹೊಸದೊಂದು ಆ್ಯಪ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ.

ನಮ್ಮ ಮೆಟ್ರೋದಲ್ಲಿ ಈಗಿರುವ ಕ್ಯೂಆರ್ ಕೋಡ್ ವ್ಯವಸ್ಥೆ ಎಲ್ಲ ಆ್ಯಪ್ಗಳಿಗೂ ಸಹಕರಿಸಲ್ಲ. ಆದ್ದರಿಂದ ಪೇಟಿಎಂ, ವಾಟ್ಸಪ್, ಯಾತ್ರಾ ಆ್ಯಪ್ಗಳಿಗೆ ಮಾತ್ರ ಕ್ಯೂಆರ್ ಕೋಡ್ ಸೌಲಭ್ಯವಿದೆ. ಆದ್ದರಿಂದ ಎಲ್ಲಾ ಆ್ಯಪ್ ಗಳಿಗೂ ಸಹಕರಿಸುವ ಯೂನಿವರ್ಸಲ್ ಆ್ಯಪ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ.

ಭಾರತ್ ಬಿಲ್ ಪೇ ಸಿಸ್ಟಮ್’ ಮಾದರಿಯಲ್ಲಿ ಇದು ಕೆಲಸ ಮಾಡಲಿದ್ದು, ಈ ಆ್ಯಪ್ ಮೂಲಕ ಮೆಟ್ರೋ ಟಿಕೆಟ್ ಪಡೆಯವುದುಸೇರಿ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಸಹ ಮಾಡಿಕೊಳ್ಳಬಹುದು. ಅಲ್ಲದೇ ಇದರ ಮೂಲಕ ನೀವು ಆಟೋ ಹಾಗೂ ಕ್ಯಾಬ್ ಬುಕ್ ಮಾಡಬಹುದಾಗಿದೆ. ಇದಲ್ಲದೇ ರೈಲುಗಳ ಮಾಹಿತಿ ಸಹ ಪಡೆಯಬಹುದು. ಈ ಹೊಸ ಆ್ಯಪ್ ವ್ಯವಸ್ಥೆಯನ್ನ ಬಿಎಂಆರ್ ಸಿಎಲ್ ಅನುಷ್ಠಾನಗೊಳಿಸಿದ್ದು, ಶೀಘ್ರದಲ್ಲೇ ಆ್ಯಪ್ ವ್ಯವಸ್ಥೆ ಜಾರಿಗೆ ಬರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular