HomeLatest Newsವಾಹನ ಸವಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಅರ್ಧಂಬರ್ಧ ರಸ್ತೆಗೆ ಪೂರ್ಣ ಟೋಲ್ ಕಟ್ಟಬೇಕಿಲ್ಲ.!

ವಾಹನ ಸವಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಅರ್ಧಂಬರ್ಧ ರಸ್ತೆಗೆ ಪೂರ್ಣ ಟೋಲ್ ಕಟ್ಟಬೇಕಿಲ್ಲ.!

ಭಾರತದ ರಸ್ತೆ ಮೂಲಸೌಕರ್ಯದಲ್ಲಿ ಕ್ರಾಂತಿ ಉಂಟುಮಾಡುತ್ತಿರುವ ಎಕ್ಸ್ಪ್ರೆಸ್ವೇಗಳ (Expressways) ವಿಚಾರದಲ್ಲಿ ಕೇಂದ್ರ ಸರ್ಕಾರವು ವಾಹನ ಸವಾರರಿಗೆ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಅಪೂರ್ಣಗೊಂಡಿರುವ ಎಕ್ಸ್ಪ್ರೆಸ್ವೇಗಳಲ್ಲಿ ಸಂಚರಿಸುವಾಗ ನೀವು ಹೆಚ್ಚಿನ ದರದ ಟೋಲ್ ಪಾವತಿಸುವ ಅಗತ್ಯವಿಲ್ಲ.

ಹೌದು. ಈ ಹಿಂದೆ ಎಕ್ಸ್ಪ್ರೆಸ್ವೇ ಪೂರ್ಣಗೊಳ್ಳದಿದ್ದರೂ ಅದರ ಕೆಲವು ಕಿಲೋಮೀಟರ್ಗಳ ಸಂಚಾರಕ್ಕೆ ಶೇ. 25 ರಷ್ಟು ಹೆಚ್ಚಿನ (ಪ್ರೀಮಿಯಂ) ಟೋಲ್ ವಿಧಿಸಲಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ, ಎಕ್ಸ್ಪ್ರೆಸ್ವೇ ಸಂಪೂರ್ಣವಾಗಿ (End-to-End) ಸಿದ್ಧವಾಗುವವರೆಗೆ, ಅದರ ತೆರೆದ ಭಾಗಕ್ಕೆ ಸಾಮಾನ್ಯ ರಾಷ್ಟ್ರೀಯ ಹೆದ್ದಾರಿಯ ದರವನ್ನೇ ವಿಧಿಸಲಾಗುತ್ತದೆ.
ಶೇ. 25 ರಷ್ಟು ಹಣ ಉಳಿತಾಯ: ಎಕ್ಸ್ಪ್ರೆಸ್ವೇಗಳು ಸಾಮಾನ್ಯ ಹೆದ್ದಾರಿಗಳಿಗಿಂತ ಶೇ. 25 ರಷ್ಟು ಹೆಚ್ಚು ಟೋಲ್ ಹೊಂದಿರುತ್ತವೆ. ರಸ್ತೆ ಪೂರ್ಣಗೊಳ್ಳದಿದ್ದರೂ ಈ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿರುವುದಕ್ಕೆ ಸಾರ್ವಜನಿಕರಲ್ಲಿ ಅಸಮಾಧಾನವಿತ್ತು. ಈಗ ಈ ಹೊರೆಯನ್ನು ಸರ್ಕಾರ ಇಳಿಸಿದೆ.

ನಿಯಮ ಜಾರಿ: ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ನಿರ್ಧರಿಸುವುದು ಮತ್ತು ವಸೂಲಿ) ನಿಯಮಗಳು, 2008’ ಕ್ಕೆ ತಿದ್ದುಪಡಿ ತಂದಿದ್ದು, ಹೊಸ ನಿಯಮವು ಫೆಬ್ರವರಿ 15, 2026 ರಿಂದ ಜಾರಿಗೆ ಬರಲಿದೆ.ಈ ವ್ಯವಸ್ಥೆಯು ರಸ್ತೆ ಸಂಪೂರ್ಣವಾಗಿ ಸಿದ್ಧವಾಗುವವರೆಗೆ ಅಥವಾ ಗರಿಷ್ಠ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರದ ಈ ಬದಲಾವಣೆಯ ಉದ್ದೇಶವೇನು?

  1. ಹಳೆಯ ಹೆದ್ದಾರಿಗಳ ಮೇಲೆ ಒತ್ತಡ ಕಡಿಮೆ: ಎಕ್ಸ್ಪ್ರೆಸ್ವೇಗಳಲ್ಲಿ ಟೋಲ್ ದರ ಕಡಿಮೆ ಇರುವುದರಿಂದ ಜನರು ಅರ್ಧಂಬರ್ಧ ಸಿದ್ಧವಾಗಿರುವ ಎಕ್ಸ್ಪ್ರೆಸ್ವೇಗಳನ್ನು ಬಳಸಲು ಮುಂದಾಗುತ್ತಾರೆ. ಇದರಿಂದ ಹಳೆಯ ರಸ್ತೆಗಳಲ್ಲಿ ಟ್ರಾಫಿಕ್ ಕಡಿಮೆಯಾಗುತ್ತದೆ.
  2. ವೇಗದ ಪ್ರಯಾಣ: ಸಂಚಾರ ದಟ್ಟಣೆ ಕಡಿಮೆಯಾಗುವುದರಿಂದ ಪ್ರಯಾಣದ ಸಮಯ ಉಳಿಯುತ್ತದೆ.
  3. ಮಾಲಿನ್ಯ ನಿಯಂತ್ರಣ: ಟ್ರಾಫಿಕ್ ಜಾಮ್ ಕಡಿಮೆಯಾಗುವುದರಿಂದ ವಾಹನಗಳಿಂದ ಹೊರಹೊಮ್ಮುವ ಮಾಲಿನ್ಯವೂ ಇಳಿಮುಖವಾಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular