HomeLatest Newsರೈತರಿಗೆ ಗುಡ್ ನ್ಯೂಸ್ :  ಹೆಸರು, ಉದ್ದು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಖರೀದಿ ಅವಧಿ ವಿಸ್ತರಣೆ

ರೈತರಿಗೆ ಗುಡ್ ನ್ಯೂಸ್ :  ಹೆಸರು, ಉದ್ದು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಖರೀದಿ ಅವಧಿ ವಿಸ್ತರಣೆ

ಬೆಂಗಳೂರು :   ರೈತರ ಅನುಕೂಲಕ್ಕಾಗಿ ಹೆಸರು, ಉದ್ದು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಖರೀದಿ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

2025-26 ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ (FAQ) ಗುಣಮಟ್ಟದ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಉತ್ಪನ್ನವನ್ನು ರೈತರಿಂದ ಖರೀದಿಸಲು ನಿಗದಿಪಡಿಸಿರುವ ಗರಿಷ್ಠ ಮಿತಿಯನ್ನು ತೆಗೆದು FRUITS ತಂತ್ರಾಂಶದಲ್ಲಿ ಲಭ್ಯವಿರುವ ರೈತರ ಬೆಳೆಯ ಮಾಹಿತಿ ಆಧಾರದ ಮೇಲೆ ಎಕರೆಗೆ ಅನುಗುಣವಾಗಿ ಖರೀದಿಸಲು ಆದೇಶಿಸಲಾಗಿರುತ್ತದೆ.

ಈಗಾಗಲೇ ನಿಗಧಿತ ಅವಧಿಯಲ್ಲಿ ನೊಂದಾಯಿಸಿಕೊಂಡಿರುವ ರೈತರು ಮಾರಾಟ ಮಾಡಲು ಖರೀದಿ ಅವಧಿಯನ್ನು ಈ ಕೆಳಕಂಡ ಅವಧಿಗೆ ವಿಸ್ತರಿಸಲಾಗಿರುತ್ತದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

– ಹೆಸರು ಕಾಳು- ನಿಗದಿಪಡಿಸಿದ ದರ: ₹8,768

– ಅಂತಿಮ ದಿನಾಂಕ : 22-01-2026.

– ಉದ್ದಿನ ಕಾಳು- ನಿಗದಿಪಡಿಸಿದ ದರ: ₹ 7,800

– ಅಂತಿಮ ದಿನಾಂಕ: 22-01-26

– ಸೂರ್ಯಕಾಂತಿ-ನಿಗದಿಪಡಿಸಿದ ದರ: ₹ 7,721

– ಅಂತಿಮ ದಿನಾಂಕ: 22-01-26

– ಸೋಯಾಬೀನ್- ನಿಗದಿಪಡಿಸಿದ ದರ: ₹ 5,328

– ಅಂತಿಮ ದಿನಾಂಕ : 26-01-26

ಕಲಬುರಗಿ ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ (PACS) ಹಾಗೂ FPO ಗಳಿಗೆ ಭೇಟಿ ನೀಡಿ ತಾವು ಬೆಳೆದ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ ಹಾಗು ಸೋಯಾಬೀನ ನಿಗದಿತ ಅವಧಿಯಲ್ಲಿ ಮಾರಾಟ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಮೊಬೈಲ್ ನಂಬರ್ ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

1)ಉದ್ದಿನ ಕಾಳು & ಸೋಯಾಬೀನ ಖರೀದಿಗಾಗಿ ದೂರವಾಣಿ ಸಂಖ್ಯೆ – 9449864446 (KSCMF)

2)ಹೆಸರು ಕಾಳು ಖರೀದಿಗಾಗಿ ದೂರವಾಣಿ ಸಂಖ್ಯೆ – 9964474444 (KSPAML)

3)ಸೂರ್ಯಕಾಂತಿ ಖರೀದಿಗಾಗಿ ದೂರವಾಣಿ ಸಂಖ್ಯೆ – 9591812142 – (KOF)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular