ತುಮಕೂರು: ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ಟೆಂಡರ್ ಬೆಲೆ ಸೋಮವಾರ ಕ್ವಿಂಟಾಲ್ ಗೆ ದಾಖಲೆಯ 38,000 ರೂ.ಗೆ ಮಾರಾಟವಾಗಿದೆ. ಇದು ಕ್ವಿಂಟಲ್ ಕೊಬ್ಬರಿಗೆ ಸಿಕ್ಕ ಗರಿಷ್ಠ ಮೊತ್ತದ ದಾಖಲೆ ಆಗಿದೆ.
ಕಳೆದ ಸೋಮವಾರ ಟೆಂಡರ್ ನಲ್ಲಿ ಕ್ವಿಂಟಾಲ್ ಕೊಬ್ಬರಿ 32 ಸಾವಿರ ರೂ.ಗೆ ಮಾರಾಟವಾಗಿತ್ತು, ಗುರುವಾರ 36,000 ರೂ.ಗೆ ತಲುಪಿತ್ತು. ಸೋಮವಾರ 38 ಸಾವಿರ ರೂ.ಗೆ ಮಾರಾಟವಾಗಿ ಕೊಬ್ಬರಿ ಮಾರುಕಟ್ಟೆ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಯ ದಾಖಲೆ ಬರೆದಿದೆ.
ಏ. 2ರಂದು ತಿಂಗಳ ಮೊದಲ ಹರಾಜಿನಲ್ಲಿ 31 ಸಾವಿರ ರೂಪಾಯಿ ದರ ಇತ್ತು. ಏಪ್ರಿಲ್ 13 ರಂದು ಸೋಮವಾರದ ಹರಾಜನಲ್ಲಿ 38,000 ರೂ.ಗೆ ತಲುಪಿದೆ. 10 ದಿನದಲ್ಲಿ 8,000 ರೂ. ಏರಿಕೆ ಕಂಡಿದೆ. ಮಾರುಕಟ್ಟೆಗೆ 3989 ಚೀಲ(1705) ಕ್ವಿಂಟಾಲ್ ಕೊಬ್ಬರಿ ಆವಕವಾಗಿದೆ.
ತಿಪಟೂರು ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿದ್ದು, ದರ ಏರುಗತಿಯಲ್ಲಿ ಸಾಗುತ್ತಿದೆ. 40,000ರೂ. ವರೆಗೂ ತಲುಪುವ ನಿರೀಕ್ಷೆ ಇದೆ. ಕೊಬ್ಬರಿ ಬೆಲೆ ಏರಿಕೆಯಿಂದ ರೈತರು ಖುಷಿಯಾಗಿದ್ದಾರೆ.

