ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆಯ ಕೇಂದ್ರೀಯ ಟ್ರಸ್ಟ್ ಮಂಡಳಿ(ಸಿಬಿಟಿ) ಸಭೆ ಅಕ್ಟೋಬರ್ 13 ರಂದು ನಡೆಯಲಿದೆ. ಸಭೆಯಲ್ಲಿ ಪಿಂಚಣಿ ಹೆಚ್ಚಳ ವಿಚಾರ ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ.
ಈಗ ಇಪಿಎಫ್ ಪೆನ್ಷನ್ ಯೋಜನೆ ಅಡಿಯಲ್ಲಿ ನಿವೃತ್ತರಿಗೆ ಮಾಸಿಕ ಒಂದು ಸಾವಿರ ರೂಪಾಯಿ ಸಂದಾಯವಾಗುತ್ತಿದ್ದು, ಈ ಮೊತ್ತವನ್ನು 7500 ರೂ.ಗೆ ಹೆಚ್ಚಲ ಮಾಡಬೇಕೆಂದು ಕಾರ್ಮಿಕ ಸಂಘಟನೆಗಳ ನಾಯಕರು ಮತ್ತು ಪಿಂಚಣಿದಾರರು ಅನೇಕ ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಸಿಬಿಟಿ ಸಭೆಯಲ್ಲಿ ಈ ವಿಷಯ ಕಾರ್ಯಸೂಚಿಯಲ್ಲಿ ಇಲ್ಲವಾದರೂ ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ.
ಪಿಂಚಣಿ ಮೊತ್ತ ಹೆಚ್ಚಳಕ್ಕೆ ಕಾರ್ಮಿಕ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ. ಇಪಿಎಫ್ಒ 3.0 ಅಡಿಯಲ್ಲಿ ನಿವೃತ್ತಿ ನಿಧಿ ನಿರ್ವಹಣೆ ತಂತ್ರಜ್ಞಾನ ನವೀಕರಣ, ಉದ್ಯೋಗಿಗಳಿಗೆ ಸಂಬಂಧಿಸಿದ ಪ್ರೋತ್ಸಾಹಕ ಯೋಜನೆ ಹಾಗೂ ಹೂಡಿಕೆ ಮಾದರಿ ಬಲಪಡಿಸುವುದು ಸೇರಿ ಅನೇಕ ವಿಷಯಗಳ ಬಗ್ಗೆ ಸಿಬಿಟಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.