HomeLatest Newsಗ್ರಾಹಕರಿಗೆ ಗುಡ್ ನ್ಯೂಸ್: ಇನ್ನು ಮುಂದೆ 10ರೂ. ಪ್ಯಾಕ್ ನಲ್ಲೂ ನಂದಿನಿ ಹಾಲು, ಮೊಸರು

ಗ್ರಾಹಕರಿಗೆ ಗುಡ್ ನ್ಯೂಸ್: ಇನ್ನು ಮುಂದೆ 10ರೂ. ಪ್ಯಾಕ್ ನಲ್ಲೂ ನಂದಿನಿ ಹಾಲು, ಮೊಸರು

ಬೆಂಗಳೂರು: ಕೆಎಂಎಫ್ ನಂದಿನಿಯಿಂದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇನ್ನು ಮುಂದೆ ನಂದಿನಿ ಹಾಲು ಮತ್ತು ಮೊಸರು 10 ರೂಪಾಯಿ ಪ್ಯಾಕೆಟ್ ನಲ್ಲೂ ಸಿಗಲಿದೆ.

10 ರೂ.ಮೌಲ್ಯದ ಹಾಲು, ಮೊಸರಿನ ಪ್ಯಾಕೆಟ್ ಗಳೊಂದಿಗೆ ಮೀಡಿಯಂ ಫ್ಯಾಟ್ ಇರುವ ಪನ್ನೀರ್, ಹೈ ಅರೋಮ ತುಪ್ಪ, ಪ್ರೊ ಬಯಾಟಿಕ್, ಮಾವಿನ ಲಸ್ಸಿ, ಡೇರಿ ವೈಟ್ನರ್ ಸೇರಿದಂತೆ ಒಟ್ಟು 10 ಹೊಸ ಉತ್ಪನ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

ಕೆಎಂಎಫ್ ನಂದಿನಿ ಬ್ರಾಂಡ್ ನ ಹಾಲು 160 ಎಂಎಲ್ ಗೆ 10ರೂ., ಮೊಸರು 140 ಎಂಎಲ್ ಪ್ಯಾಕ್ ಗೆ 10 ರೂಪಾಯಿ ಮೌಲ್ಯದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲವೊಮ್ಮೆ ಮನೆಯಲ್ಲಿ ಒಬ್ಬರೇ ಇದ್ದರೆ ಹೆಚ್ಚುವರಿಯಾಗಿ ಹಾಲು ಉಳಿಯುತ್ತಿತ್ತು. ಹೀಗಾಗಿ ತಾಜಾ ಹಾಲು, ಮೊಸರು ದಿನಕ್ಕಾಗುವಷ್ಟು ತಂದು ಬಳಕೆ ಮಾಡಲು ಅನುಕೂಲವಾಗುವಂತೆ ಕಡಿಮೆ ಮೊತ್ತಕ್ಕೆ ಕಡಿಮೆ ಪ್ರಮಾಣದಲ್ಲಿ ಹಾಲು, ಮೊಸರು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular