ಬಿಎಸ್ಎನ್ಎಲ್ ಆಂತರಿಕವಾಗಿ ಅಭಿವೃದ್ಧಿಪಡಿಸಿದ ಸ್ವದೇಶಿ ಆಧುನಿಕ ಗ್ರಾಹಕರ ನೋಂದಣಿ ಮೊಬೈಲ್ ಆ್ಯಪ್ ಸಂಚಾರ ಮಿತ್ರ ಆ್ಯಪ್ ಬಿಡುಗಡೆ ಮಾಡಲಾಗಿದೆ.
ಬಿಎಸ್ಎನ್ಎಲ್ ಎಂಜಿನಿಯರ್ ಗಳೇ ಸೇರಿ ಈ ಸಂಚಾರ ಮಿತ್ರ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಬಿಎಸ್ಎನ್ಎಲ್ ಜಾಲಕ್ಕೆ ಹೊಸ ಗ್ರಾಹಕರನ್ನು ಸೇರಿಸಲು ಸಾರ್ವಜನಿಕ ದೂರ ಸಂಪರ್ಕ ಸಂಸ್ಥೆ ಬಳಕೆ ಮಾಡುತ್ತಿದ್ದ ಆ್ಯಪ್ ಬದಲಿಸಲಾಗಿದೆ.
ಈ ಹಿಂದೆ ಬಿಎಸ್ಎನ್ಎಲ್ ಆಧಾರ್ ಆಧಾರಿತ ಕೆವೈಸಿ ಪರಿಶೀಲನೆಗೆ ಖಾಸಗಿ ಸಂಸ್ಥೆಯೊಂದರಿಂದ ಅಭಿವೃದ್ಧಿಪಡಿಸಲಾದ ಸಂಚಾರ್ ಆಧಾರ್ ಮೊಬೈಲ್ ಆ್ಯಪ್ ಬಳಕೆ ಮಾಡಲಾಗುತ್ತಿದ್ದು, ಈ ಆ್ಯಪ್ ಬಿಎಸ್ಎನ್ಎಲ್ ನ ರೀಟೇಲ್ ವ್ಯಾಪಾರಿಗಳು ಮತ್ತು ಫ್ರಾಂಚೈಸಿಗಳಿಗೆ ಗ್ರಾಹಕರ ಗುರುತನ್ನು ಡಿಜಿಟಲ್ ಮೂಲಕ ಪರಿಶೀಲಿಸಲು ಸಹಾಯ ಮಾಡುತ್ತಿದ್ದು, ಇದೀಗ ಬಿಎಸ್ಎನ್ಎಲ್ ಎಂಜಿನಿಯರ್ ಗಳೇ ಅಭಿವೃದ್ಧಿಪಡಿಸಿದ ಸಂಚಾರ ಮಿತ್ರ ಆ್ಯಪ್ ಬಿಡುಗಡೆ ಮಾಡಲಾಗಿದೆ.

