ಪ್ರಯಾಣಿಕರಿಗೆ ಗುಡ್ ನ್ಯೂಸ್ : ‘KSRTC’ ಯಿಂದ ಶೀಘ್ರವೇ ‘ಕ್ಯಾಶ್ ಲೆಸ್’ ಟಿಕೆಟಿಂಗ್ ವ್ಯವಸ್ಥೆ ಜಾರಿ

ಬೆಂಗಳೂರು : ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ( KSRTC)   ಗುಡ್ ನ್ಯೂಸ್ ನೀಡಿದ್ದು, ಶೀಘ್ರವೇ ಕ್ಯಾಶ್ ಲೆಸ್ ಟಿಕೆಟ್ ವ್ಯವಸ್ಥೆ ಜಾರಿಗೆ ತರಲಿದೆ.

ಈಗಾಗಲೇ ಈ ವ್ಯವಸ್ಥೆಗಳು ಪ್ರಕ್ರಿಯೆ ಆರಂಭವಾಗಿದ್ದು, ಪ್ರಯಾಣಿಕರು ಕ್ಯಾಶ್ ಲೆಸ್ ಮೂಲಕ ಟಿಕೆಟ್ ಪಡೆಯಬಹುದು.

ಹೌದು, ಬಸ್ ಗಳು ರಶ್ ಇದ್ದಾಗ ಕಂಡಕ್ಟರ್ ಗಳು ಚಿಲ್ಲರೆಗಾಗಿ ಬಸ್ ನಲ್ಲಿ ಪ್ರಯಾಣಿಕರ ಜೊತೆ ಜಗಳ, ಕಿರಿಕಿರಿ ಮಾಡುವುದನ್ನು ತಪ್ಪಿಸಲು ಹಾಗೂ ಕೆಲವರು ಬಸ್ ನಲ್ಲಿ ಟಿಕೆಟ್ ಪಡೆಯದೇ ಪ್ರಯಾಣ ಮಾಡುವುದನ್ನು ತಪ್ಪಿಸಲು ಈ ವ್ಯವಸ್ಥೆ ಜಾರಿಗೆ ಬರಲಿದೆ. ಆ್ಯಂಡ್ರಾಯ್ಡ್ ಸೌಲಭ್ಯದ ವಿದ್ಯುನ್ಮಾನ ಟಿಕೆಟ್ ಯಂತ್ರಗಳಲ್ಲಿ ಯಾವುದೇ ಯುಪಿಐ ವ್ಯವಸ್ಥೆ, ಕಾರ್ಡ್ಗಳ ಮೂಲಕ ಹಣ ಪಾವತಿ ಮಾಡಬಹುದಾಗಿದೆ.

ಪ್ರಯಾಣಿಕರು ವೈಫೈ ಸಂಪರ್ಕ, ಯುಪಿಐ, ಕ್ಯುಆರ್ ಕೋಡ್, ವಿವಿಧ ಕಾರ್ಡ್ ಗಳ ಮೂಲಕ ಹಣ ಪಾವತಿಸಬಹುದಾಗಿದೆ, ಈ ನಿಟ್ಟಿನಲ್ಲಿ 10,500 ಇಟಿಎಂ ಯಂತ್ರಗಳನ್ನು ಖರೀದಿಸಲು ಸರ್ಕಾರ ಸಿದ್ದತೆ ನಡೆಸಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರವೇ ಕ್ಯಾಶ್ ಲೆಸ್ ಟಿಕೆಟ್ ವ್ಯವಸ್ಥೆ ಜಾರಿಗೆ ಬರಲಿದೆ.

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read