HomeKarnatakaದೇವಸ್ಥಾನದ ಅರ್ಚಕರು ,ಸಿಬ್ಬಂದಿ ಮಕ್ಕಳಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಶೈಕ್ಷಣಿಕ ಆರ್ಥಿಕ...

ದೇವಸ್ಥಾನದ ಅರ್ಚಕರು ,ಸಿಬ್ಬಂದಿ ಮಕ್ಕಳಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಶೈಕ್ಷಣಿಕ ಆರ್ಥಿಕ ನೆರವು

ಬೆಂಗಳೂರು : ರಾಜ್ಯ ಸರ್ಕಾರವು ದೇವಸ್ಥಾನಗಳ ಅರ್ಚಕರು ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ಸಿಹಿಸುದ್ದಿ ನೀಡಿದ್ದು,  ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.

ಈ ಕುರಿತು ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದು, ಬಿ ಮತ್ತು ಸಿ ವರ್ಗದ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರ ಅರ್ಚಕರು ಮತ್ತು ಸಿಬ್ಬಂದಿಯ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರವು ಪಿಯುಸಿ ವಿದ್ಯಾರ್ಥಿಗಳಿಗೆ 5,000 ರೂ., ಐಟಿಐ/ ಜೆಒಸಿ/ ಡಿಪ್ಲೊಮಾ ವಿದ್ಯಾರ್ಥಿಗಳಿಗೆ 5,000 ರೂ., ಪದವಿಗೆ 7,000 ರೂ., ಸ್ನಾತಕೋತ್ತರರಿಗೆ 15,000 ರೂ., ಆಯುರ್ವೇದ 25,000 ರೂ. ವಾರ್ಷಿಕ ಆರ್ಥಿಕ ನೆರವು ನೀಡಲಿದೆ. ಹೋಮಿಯೋಪತಿ ಕೋರ್ಸ್‌ಗಳು, ತಾಂತ್ರಿಕ ಶಿಕ್ಷಣಕ್ಕೆ (ಎಂಜಿನಿಯರಿಂಗ್) 25,000 ರೂ., ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳಿಗೆ 50,000 ರೂ. ಮತ್ತು ವಿದೇಶದಲ್ಲಿ ಅಧ್ಯಯನಕ್ಕೆ 1 ಲಕ್ಷ ರೂ. ನೆರವು ಸಿಗಲಿದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular